ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್ ನಿರ್ದೇಶಕರೊಬ್ಬರು ಚಿತ್ರದಲ್ಲಿ ತಮ್ಮ ಒಳ ಉಡುಪುಗಳನ್ನು ತೋರಿಸಲು ಬಯಸಿದ್ದರು ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಂಕಾ ಚೋಪ್ರಾ ಅವರು, ‘ಶೂಟಿಂಗ್ ಸೆಟ್ನಲ್ಲಿ ಸೆಡ್ಯೂಸ್ ದೃಶ್ಯವೊಂದರಲ್ಲಿ ನಿರ್ದೇಶಕರು ನನ್ನ ಸ್ಟೈಲಿಶ್‌ಗೆ ನನ್ನ ಒಳ ಉಡುಪು ತೋರಬೇಕೆಂದು ಹೇಳಿದ್ದರು ಎಂದು ಅಚ್ಚರಿ ಎನಿಸುವ ಘಟನೆಯನ್ನು ಹೇಳಿದ್ದಾರೆ.
ʻʻ2002 ಅಥವಾ 2003ರಲ್ಲಿ ನಡೆದ ಘಟನೆ ಅದು. ಆಗಷ್ಟೇ ನಾನು ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದೆ. ನಾನು ಸೆಡ್ಯೂಸಿಂಗ್ ದೃಶ್ಯವೊಂದನ್ನು ಮಾಡಬೇಕಿತ್ತು. ನಾನು ಒಂದೊಂದೆ ಬಟ್ಟೆಗಳನ್ನು ಬಿಚ್ಚಿಡಬೇಕಿತ್ತು. ಆ ಸಮಯದಲ್ಲಿ ನಿರ್ದೇಶಕರು ನನ್ನ ಸ್ಟೈಲಿಶ್‌ಗೆ ಪ್ರಿಯಾಂಕಾ ಒಳ ಉಡುಪು ತೋರಬೇಕೆಂದು ಹೇಳಿದ್ದರು. ಇಲ್ಲದಿದ್ದರೆ ಸಿನಿಮಾ ಯಾರು ನೋಡಲು ಬರುತ್ತಾರೆ? ಎಂದು ಹೇಳಿದ್ದರು. ನಿರ್ದೇಶಕರು ಇದನ್ನು ನನಗೆ ಹೇಳಲಿಲ್ಲ. ನನ್ನ ಮುಂದೆ ಇದ್ದ ಸ್ಟೈಲಿಸ್ಟ್‌ಗೆ ಈ ಮಾತು ಹೇಳಿದರು. ಅದೊಂದು ಅಮಾನವೀಯ ಕ್ಷಣವಾಗಿತ್ತು. ಎರಡು ದಿನ ಕೆಲಸ ಮಾಡಿದ ನಂತರ ಸಿನಿಮಾದಿಂದ ನಾನು ಹೊರನಡೆದೆʼʼ ಎಂದಿದ್ದಾರೆ ಪ್ರಿಯಾಂಕಾ.
ಈ ನಿರ್ದೇಶಕ ಯಾರು ಎನ್ನುವುದನ್ನು ಪ್ರಿಯಾಂಕಾ ಬಹಿರಂಗ ಪಡಿಸಿಲ್ಲ. ಈಗಾಗಲೇ ಅವರು ಸಿಟಾಡೆಲ್ ಸಿರೀಸ್‌ನಿಂದ ಸಖತ್ ಸುದ್ದಿಯಲ್ಲಿದ್ದಾರೆ. ಅವರು ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಫರ್ಹಾನ್ ಅಖ್ತರ್ ಅವರ ʻಜೀ ಲೆ ಜರಾʼದಲ್ಲಿ ಕಾಣಿಸಿಕೊಳ್ಳಲಿದ್ದಾರೆ
Be the first to comment