ಎಸ್ಎಸ್ ರಾಜಮೌಳಿ ಬಿಗ್ ಪ್ರಾಜೆಕ್ಟ್ SSMB 29ರಲ್ಲಿ ಹಳದಿ ಸೀರೆಯಲ್ಲಿ ಗನ್ ಹಿಡಿದು ಮಾಸ್ ಲುಕ್ ನೀಡುತ್ತಿರುವ ಪ್ರಿಯಾಂಕಾ ಚೋಪ್ರಾ ಅವರ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಮಂದಾಕಿನಿ ಎಂಬ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜಮೌಳಿ ತಮ್ಮ ಪೋಸ್ಟರ್ ರಿಲೀಸ್ನಲ್ಲಿ ಪ್ರಿಯಾಂಕಾ ಚೋಪ್ರಾ ಅವರನ್ನು ಸ್ವಾಗತಿಸಿ , “ಮಂದಾಕಿನಿ ಪಾತ್ರವನ್ನು ಇಡೀ ವಿಶ್ವವೇ ನೋಡಲು ಕಾತುರವಾಗಿದೆ” ಎಂದು ಪೋಸ್ಟ್ ಮಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಭಾರತೀಯ ಚಿತ್ರರಂಗಕ್ಕೆ ಕಮ್ಬ್ಯಾಕ್ ನೀಡಿದ್ದಾರೆ. SSMB 29ರ ಬೋಲ್ಡ್ ಮತ್ತು ಮಾಸ್ ಲುಕ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಈ ಚಿತ್ರದಲ್ಲಿ ಸ್ಟಾರ್ ನಟ ಮಹೇಶ್ ಬಾಬು ನಾಯಕ ಪಾತ್ರದಲ್ಲಿದ್ದಾರೆ. ಪೋಸ್ಟರ್ ಬಿಡುಗಡೆ ನಂತರ SSMB 29 ಚಿತ್ರದ ಕಥೆ, ಜಾನರ್, ಮಹೇಶ್ ಬಾಬು ಪಾತ್ರ, ಪ್ರಿಯಾಂಕಾ ಚೋಪ್ರಾ ಪಾತ್ರ ಕುರಿತು ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಅಭಿಮಾನಿಗಳು ಸಿನಿಮಾಗೆ ಸಂಬಂಧಿಸಿದ ಹೊಸ ಅಪ್ಡೇಟ್ ಗೆ ಕಾಯುತ್ತಿದ್ದಾರೆ. ಎಸ್ಎಸ್ ರಾಜಮೌಳಿ ತಮ್ಮ ಪ್ರಾಜೆಕ್ಟ್ ಬಗ್ಗೆ ನಿರಂತರವಾಗಿ ಹೊಸ ಅಪ್ಡೇಟ್ ನೀಡುತ್ತಿದ್ದಾರೆ.
—-





Be the first to comment