ಬಹು ಭಾಷಾ ನಟಿ ಪ್ರಿಯಾಮಣಿ ಮುಖ್ಯ ಪಾತ್ರದಲ್ಲಿ ನಟಿಸಿ ಜನ ಮೆಚ್ಚುಗೆ ಪಡೆದಿದ್ದ Dr.56 ಸಿನಿಮಾ,
‘ಚಿತ್ರಸಂತೆ’ ಪ್ರಶಸ್ತಿಗೆ ಭಾಜನವಾಗಿದೆ.
ಒಟ್ಟು ಎರಡು ವಿಭಾಗದಲ್ಲಿ Dr.56 ಚಿತ್ರ ಚಿತ್ರಸಂತೆ ಸಿನಿಮಾ ಪತ್ರಿಕೆ ನೀಡುವ ‘ಚಿತ್ರಸಂತೆ’ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
Dr.56 ಚಿತ್ರದಲ್ಲಿ ನಟಿಸಿದ್ದ ಪ್ರವೀಣ್ ರೆಡ್ಡಿ (ಪಿಆರ್) ಅವರಿಗೆ ಅತ್ಯುತ್ತಮ ನಟ (ಮೊದಲ ಚಿತ್ರ) ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಅತ್ಯುತ್ತಮ ಚಿತ್ರ ಎಂದು ಎರಡು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ.
Dr.56 ಮೆಡಿಕಲ್ ಮಾಫಿಯಾ ಕುರಿತ ಥ್ರಿಲ್ಲರ್ ಚಿತ್ರವಾಗಿದೆ. ರಾಜೇಶ್ ಆನಂದ ಲೀಲಾ ಚಿತ್ರದ ನಿರ್ದೇಶಕರು. ಸಿನಿಮಾ ಹರಿ ಹರ ಪಿಕ್ಚರ್ಸ್ ಹಾಗೂ ಶ್ರೀ ಲಕ್ಷ್ಮಿ ಜ್ಯೋತಿ ಕ್ರಿಯೇಷನ್ಸ್ ಮೂಲಕ ಬಿಡುಗಡೆ ಕಂಡಿತ್ತು.
ಪ್ರಿಯಾಮಣಿ, ಪ್ರವೀಣ್ ರೆಡ್ಡಿ, ರಾಜ್ ದೀಪಕ್ ಶೆಟ್ಟಿ ಹಾಗೂ ರಮೇಶ್ ಭಟ್ ಈ ಚಿತ್ರದ ಪ್ರಮುಖ ನಟರಾಗಿದ್ದಾರೆ.
ಚಿತ್ರ ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ಕಳೆದ ಡಿಸೆಂಬರ್ ನಲ್ಲಿ ಬಿಡುಗಡೆಗೊಂಡಿತ್ತು.
______


Be the first to comment