ಹರಿಹರ ಪಿಕ್ಚರ್ಸ್ ಲಾಂಛನದಲ್ಲಿ, ಪ್ರವೀಣ್ ರೆಡ್ಡಿ ನಿರ್ಮಿಸಿ, ರಾಜೇಶ್ ಆನಂದಲೀಲಾ ನಿರ್ದೇಶಿಸುತ್ತಿರುವ ಸಿನಿಮಾ ಡಾ. 56.ಪ್ರಿಯಾಮಣಿ ಪ್ರಧಾನಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ನಿರ್ಮಾಪಕ ಪ್ರವೀಣ್ ರೆಡ್ಡಿ ಕತೆ, ಚಿತ್ರಕತೆ, ಬರೆದು ನಿರ್ಮಾಣವನ್ನೂ ಮಾಡುತ್ತಿದ್ದಾರೆ.
ಪ್ರಿಯಾಮಣಿ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಜೂನ್ 4ರಂದು ಡಾ. 56 ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ. ವಿಶೇಷವೆಂದರೆ ಇದು ಪ್ರಿಯಾಮಣಿ ಅಭಿನಯದ 56ನೇ ಚಿತ್ರವೂ ಆಗಿರುವುದು ಕಾಕತಾಳೀಯವಾಗಿದೆ.
ವೈದ್ಯಕೀಯ ವಿಜ್ಞಾನದ ಕುರಿತ ಈ ಸಿನಿಮಾ ಹೊಸ ಭಗೆಯ ಕತೆ ಹೊಂದಿದೆ. ಜೊತೆಗೆ ಮರ್ಡರ್ ಮಿಸ್ಟರಿಯ ಎಳೆ ಕೂಡಾ ರೋಚಕವಾಗಿ ತೆರೆದುಕೊಳ್ಳುತ್ತಾ ಸಾಗುತ್ತದೆ. ಪ್ರಿಯಾಮಣಿ ಈ ಚಿತ್ರದಲ್ಲಿ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಂಡಿದಾರೆ. ಒಂದು ಹಾಡು ಮತ್ತು ಸಾಹಸ ದೃಶ್ಯಗಳ ಚಿತ್ರೀಕರಣ ಮುಗಿದರೆ `ಡಾ.56’ ಮುಕ್ತಾಯವಾಗಲಿದೆ.
ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ವಿಶ್ವ ಸಂಕಲನ, ಶಂಕರ್ ಸಂಭಾಷಣೆ, ಶ್ರೀಕಾಂತ್ ಕಶ್ಯಪ್ ಕಾರ್ಯಕಾರಿ ನಿರ್ಮಾಣದ ಈ ಚಿತ್ರಕ್ಕೆ ನೋಬಿನ್ ಪೌಲ್ ಸಂಗೀತವಿದೆ. ಈ ಚಿತ್ರದಲ್ಲಿ ಪ್ರಿಯಾಮಣಿ, ಪ್ರವೀಣ್, ರಮೇಶ್ ಭಟ್, ಯತಿರಾಜ್, ವೀಣಾ ಪೊನ್ನಪ್ಪ, ದೀಪಕ್ ಶೆಟ್ಟಿ ಮುಂತಾದವರ ಅಭಿನಯವಿದೆ.
https://youtu.be/Er2LLoIUnF4

Be the first to comment