ನಟಿ ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ದಾಂಪತ್ಯದ ಬಗ್ಗೆ ಮುಸ್ತಫಾ ಅವರ ಮೊದಲ ಪತ್ನಿ ಆಯೆಷಾ ತಕರಾರು ತೆಗೆದಿದ್ದು ಈ ವಿವಾಹ ಅಸಿಂಧು ಎಂದು ಗಂಭೀರ ಆರೋಪ ಮಾಡಿದ್ದಾರೆ.
“ಕಾನೂನಿನ ಪ್ರಕಾರ ಮುಸ್ತಫಾ ಜೊತೆಗಿನ ಮದುವೆ ಕೊನೆಗೊಂಡಿಲ್ಲ. ತಾನಿನ್ನು ಮುಸ್ತಫಾ ಅವರ ಪತ್ನಿ” ಎಂದು ಅಯೆಷಾ ಆರೋಪಿಸಿದ್ದು ವಿವಾದ ಉಂಟಾಗಿದೆ.
ಈ ನಡುವೆ ಪ್ರಿಯಾಮಣಿ, “ಮುಸ್ತಫಾ ರಾಜ್ ಜೊತೆಗಿನ ತನ್ನ ದಾಂಪತ್ಯ ಜೀವನ ಚೆನ್ನಾಗಿದೆ. ನಮ್ಮ ನಡುವಣ ಸಂಬಂಧ ಗಟ್ಟಿಯಾಗಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
“ಮುಸ್ತಫಾ ಅವರು ಅವರು ಯುಎಸ್‌ನಲ್ಲಿದ್ದಾರೆ. ಅಲ್ಲೇ ಕೆಲಸ ಮಾಡುತ್ತಿದ್ದಾರೆ. ನಾವು ಪ್ರತಿದಿನ ಒಬ್ಬರಿಗೊಬ್ಬರು ಮಾತನಾಡುತ್ತೇವೆ. ನಾನು ಶೂಟಿಂಗ್‌ನಲ್ಲಿ ಬ್ಯುಸಿ ಇದ್ದರೂ ಫೋನ್ ಮತ್ತು ಮೆಸೇಜ್ ಮಾಡುತ್ತೇನೆ” ಎಂದು ಪ್ರಿಯಾಮಣಿ ಹೇಳಿದ್ದಾರೆ.
ಇದೇ ವೇಳೆ ಮೊದಲ ಪತ್ನಿಯ ಆರೋಪವನ್ನು ತಳ್ಳಿಹಾಕಿರುವ ಮುಸ್ತಫಾ,” ನನ್ನ ವಿರುದ್ಧದ ಆರೋಪ ಸುಳ್ಳು. ನಾನು ಮಕ್ಕಳಿಗಾಗಿ ಆಯೆಷಾಗೆ ಹಣವನ್ನು ನೀಡುತ್ತಿದ್ದೀನಿ. ನನ್ನಿಂದ ಹಣ ವಸೂಲಿ ಮಾಡಲು ಹೀಗೆ ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದ್ದಾರೆ.
ಮುಸ್ತಫಾ ಮತ್ತು ಆಯೆಷಾ ಇಬ್ಬರು 2013ರಲ್ಲಿ ಬೇರೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಬಳಿಕ ಮುಸ್ತಫಾ ನಟಿ ಪ್ರಿಯಾಮಣಿ ಅವರನ್ನು 2018ರಲ್ಲಿ ಬೆಂಗಳೂರಿನಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು.
__________
Be the first to comment