ಜೇಮ್ಸ್ ನಲ್ಲಿ ಪುನೀತ್ ನೋಡಿದಾಗ ಮನಸು ಭಾರ: ಪ್ರಿಯಾ ಆನಂದ್

ಜೇಮ್ಸ್ ಚಿತ್ರದ ದೃಶ್ಯಗಳಲ್ಲಿ ಪುನೀತ್​ರನ್ನು ನೋಡುವಾಗ ಮನಸ್ಸು ಭಾರವಾಗುತ್ತದೆ ಎಂದು ಜೇಮ್ಸ್ ಚಿತ್ರದ ನಾಯಕ ನಟಿ ಪ್ರಿಯಾ ಆನಂದ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ” ಅಪ್ಪು ಹೃದಯದಿಂದ ನಗುತ್ತಿದ್ದರು. ಅವರ ನಗು ಪ್ರತಿಯೊಬ್ಬರಿಗೆ ಕನೆಕ್ಟ್ ಆಗುತ್ತಿತ್ತು. ಅವರು ಸಣ್ಣ ವಯಸ್ಸಿನಿಂದ ಇಲ್ಲಿಯವರೆಗೆ ನಗುತ್ತಲೇ ಇದ್ದರು. ಎಲ್ಲರನ್ನೂ ರಂಜಿಸುತ್ತಾ ಇದ್ದರು. ಆದರೆ ‘ಜೇಮ್ಸ್’ ಚಿತ್ರದ ಪ್ರಿ ರಿಲೀಸ್ ಈವೆಂಟ್​ನಲ್ಲಿ ಅವರಿಲ್ಲ. ಪುನೀತ್ ಇಲ್ಲದೇ ಹೀಗೆ ಸಮಾರಂಭ ಮಾಡುವುದು ಬಹಳ ದುಃಖಕರ ವಿಚಾರ” ಎಂದು ಭಾವುಕರಾಗಿದ್ದಾರೆ.

” ‘ರಾಜಕುಮಾರ’ ಚಿತ್ರದ ನಂತರ ಮತ್ತೊಮ್ಮೆ ಪುನೀತ್ ಜತೆ ತೆರೆ ಹಂಚಿಕೊಳ್ಳುವ ಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ” ಎಂದು ಅವರು ಹೇಳಿದ್ದಾರೆ.

ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರ ಮಾರ್ಚ್ 17ರಂದು ತೆರೆಗೆ ಅಪ್ಪಳಿಸುತ್ತಿದೆ. ಈಗಾಗಲೇ ದಾಖಲೆ ಮಟ್ಟದಲ್ಲಿ ಮುಂಗಡ ಟಿಕೆಟ್ ಮಾರಾಟ ಆಗಿದೆ.
ಜೇಮ್ಸ್ ಕರ್ನಾಟಕದಲ್ಲಿ ಸುಮಾರು 400 ಸಿಂಗಲ್ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿದೆ. ಚಿತ್ರತಂಡ ಕರ್ನಾಟಕದಲ್ಲಿ ಈಗಾಗಲೇ ಸುಮಾರು 135 ಚಿತ್ರಮಂದಿರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡನೇ ಹಂತದ ಚಿತ್ರಮಂದಿರಗಳ ಪಟ್ಟಿ ಬಿಡುಗಡೆಯಾಗಬೇಕಿದೆ.

ಸಿನಿಮಾ ಟಿಕೆಟ್ ಸಿಗುವುದು ಬಿಡುಗಡೆಯ ದಿನ ಕಷ್ಟ ಆಗಬಹುದು ಎನ್ನುವ ಕಾರಣಕ್ಕೆ ಮುಂಚಿತವಾಗಿಯೇ ಜನ ಟಿಕೆಟ್ ಬುಕ್ ಮಾಡಲು ಪ್ರಾರಂಭಿಸಿದ್ದಾರೆ.
ಜೇಮ್ಸ್’ನಲ್ಲಿ ನಾಯಕಿಯಾಗಿ ತಮಿಳು ನಟಿ ಪ್ರಿಯಾ ಆನಂದ್ ನಟಿಸಿದ್ದಾರೆ. ‘ರಾಜಕುಮಾರ’ ಚಿತ್ರದಲ್ಲಿ ಪುನೀತ್ ತಂದೆಯಾಗಿ ಅಭಿನಯಿಸಿದ್ದ ಹಿರಿಯ ತಮಿಳು ನಟ ಶರತ್ ಕುಮಾರ್ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ಎ. ಹರ್ಷ ಕೊರಿಯೋಗ್ರಫಿ, ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿ ನಿರ್ದೇಶಿಸಿದ್ದಾರೆ. ಕಿಶೋರ್ ಪತಿಕೊಂಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ, ಶ್ರೀಶ ಛಾಯಾಗ್ರಹಣ, ರವಿಸಂತೆ ಹೈಕ್ಲು ಕಲಾ ನಿರ್ದೇಶನ, ದೀಪು ಎಸ್‌.ಕುಮಾರ್‌ ಸಂಕಲನ ಇದೆ.

ಈ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು ಮತ್ತು ಮುಕೇಶ್ ರಿಷಿ ಸೇರಿದಂತೆ ದೊಡ್ಡ ತಾರಾಗಣ ನಟಿಸಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!