ಓವಿಯಾ

ಖಾಸಗಿ ವಿಡಿಯೋ ʼಎಂಜಾಯ್‌ʼ ಮಾಡಿ ಎಂದ ನಟಿ!

ನಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಓವಿಯಾ ಅವರ ಖಾಸಗಿ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನಟಿ ಘಟನೆಗೆ ತಲೆಕೆಡಿಸಿಕೊಳ್ಳದೆ ವ್ಯಂಗ್ಯವಾಗಿ ಉತ್ತರಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ‘ನಿಮ್ಮ 17 ಸೆಕೆಂಡುಗಳ ವೀಡಿಯೊ ಲೀಕ್ ಆಗಿದೆ ಮೇಡಂ’ ಎಂದು ಕಾಮೆಂಟ್ ಮಾಡಿದ್ದು, ಇದಕ್ಕೆ  ಓವಿಯಾ ‘ಎಂಜಾಯ್’ ಎಂದು ಉತ್ತರಿಸಿದ್ದಾರೆ.

ಸೆಲೆಬ್ರಿಟಿಗಳ ಖಾಸಗಿ ವೀಡಿಯೊಗಳು ವೈರಲ್‌ ಆದ ಸಂದರ್ಭದಲ್ಲಿ ‘ಇದನ್ನು ಶೇರ್‌ ಮಾಡಬೇಡಿ’ ‘ಅಥವಾ ‘ಅದನ್ನು ಮಾರ್ಫ್‌ ಮಾಡಲಾಗಿದೆ’ ಎಂದು ಹೇಳುವುದು ಸಾಮಾನ್ಯ ಸಂಗತಿ. ಆನೇಕ ಸೋಷಿಯಲ್‌ ಮೀಡಿಯಾ ಬಳಕೆದಾರರು ಇದನ್ನು ಅವರ ಗಮನಕ್ಕೆ ತರಲು ಯತ್ನಿಸಿದ್ದಾರೆ. ಆದರೆ ಇದಕ್ಕೆ ನಟಿಯ ಪ್ರತಿಕಿಯೆ ಮಾತ್ರ ಅಚ್ಚರಿ ಹುಟ್ಟಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಾರ್ವಜನಿಕವಾಗಿ ಹರಿದಾಡದಿದ್ದರೂ, ಈ ವಿಷಯ ಎಲ್ಲರ ಗಮನ ಸೆಳೆದಿದೆ.  ಟ್ವಿಟರ್‌ನಲ್ಲಿ ‘#OviyaLeaked’ ಟ್ಯಾಗ್ ಭಾರತದಾದ್ಯಂತ ಟ್ರೆಂಡಿಂಗ್  ಆಗಿತ್ತು.

ಮಲಯಾಳಿಯಾಗಿರುವ ಓವಿಯಾ, ಮಲಯಾಳಂ ಸಿನಿಮಾಗಳ ಜತೆಗೆ ತಮಿಳು, ತೆಲುಗು ಮತ್ತು ಕನ್ನಡದಲ್ಲಿಯೂ ನಟಿಸಿದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌ ಜತೆಗೆ ಕಿರಾತಕ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೂ ಓವಿಯಾ ಗಮನವಾಗಿತ್ತು. ಅದಾದ ಬಳಿಕ ಹಲವು ಸಿನಿಮಾಗಳಲ್ಲಿಯೂ ನಟಿಸಿದರು. ಆದರೆ ಹೇಳಿಕೊಳ್ಳುವ ಯಶಸ್ಸು ಮಾತ್ರ ಸಿಗಲಿಲ್ಲ.

Be the first to comment

Leave a Reply

Your email address will not be published. Required fields are marked *

Translate »
error: Content is protected !!