ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಮಾನುಷಿ ಚಿಲ್ಲರ್ ಅಭಿನಯದ ಬಾಲಿವುಡ್ ಸಿನಿಮಾ ‘ಪೃಥ್ವಿರಾಜ್’ ವಿವಾದಕ್ಕೆ ಸಿಲುಕಿದೆ. ಈ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಾಜಸ್ಥಾನದ ಗುರ್ಜರ್ ಸಮುದಾಯದ ಜನರು ಆರೋಪಿಸಿದ್ದಾರೆ.
ಸಿನಿಮಾವನ್ನು ವಿರೋಧಿಸಿರುವ ರಾಜಸ್ಥಾನದ ಗುರ್ಜರ್ ಸಮಾಜದ ಜನರು ಸಿನಿಮಾದ ಪ್ರದರ್ಶನವನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಪೃಥ್ವಿರಾಜ್ ಗುರ್ಜರ್ ನ್ನು ಸಿನಿಮಾದಲ್ಲಿ ರಜಪೂತ ಎಂದು ತೋರಿಸಲಾಗುತ್ತಿದೆ ಎಂದು ಗುರ್ಜರ್ ಸಮಾಜ ಆರೋಪಿಸಿದೆ. ಇದೇ ವೇಳೆ ರಜಪೂತ ಸಮಾಜದ ಜನರು ಗುರ್ಜರ್ ಸಮಾಜದ ಈ ಹಕ್ಕನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.
ಪೃಥ್ವಿರಾಜ್ ಚೌಹಾಣ್ ಅವರಿಗೆ ‘ರಜಪೂತ್’ ಎನ್ನುವ ಸರ್‌ನೆಮ್ ಬಳಸಿದರೆ, ಸಿನಿಮಾವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಗುರ್ಜರ್ ಸಮಾಜ ಹೇಳಿದೆ.
ಇದೇ ವೇಳೆ ಶ್ರೀ ರಜಪೂತ ಕರ್ಣಿ ಸೇನೆಯ ರಾಷ್ಟ್ರೀಯ ವಕ್ತಾರ ವಿಜೇಂದರ್ ಸಿಂಗ್ ಸಕ್ತಾವತ್ ಅವರು, ಆರಂಭದಲ್ಲಿ ಗುರ್ಜರ್‌ಗಳು ಗೌಚರ್‌ಗಳಾಗಿದ್ದರು. ನಂತರ ಅದು ಗುಜ್ಜರ್, ಗುರ್ಜರ್‌ಗಳಾಗಿ ಮಾರ್ಪಟ್ಟಿದೆ ಮತ್ತು ಅವರು ಮೂಲತಃ ಗುಜರಾತಿನವರು ಮತ್ತು ಆದ್ದರಿಂದ ಗುರ್ಜರ್ಸ್ ಎಂದು ಕರೆಯುತ್ತಾರೆ. ಗುರ್ಜರ್ ಎಂಬ ಪದವು ಸ್ಥಳಕ್ಕೆ ಸಂಬಂಧಿಸಿದೆ ಹೊರತು, ಯಾವುದೇ ಜಾತಿಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಅಕ್ಷಯ್ ಕುಮಾರ್ ಅವರು, ನಮ್ಮ ದೇಶ ಕಂಡ ಅತ್ಯಂತ ಧೈರ್ಯಶಾಲಿ ಯೋಧ, ನಿಜವಾದ ರಾಜರಲ್ಲಿ ಪೃಥ್ವಿರಾಜ್ ಒಬ್ಬರು ಎಂದು ಹೇಳಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಸಂಜಯ್ ದತ್, ಸೋನು ಸಾದು, ಮಾನುಷಿ ಚಿಲ್ಲರ್ ನಟಿಸುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದ್ದು, ಚಿತ್ರವನ್ನು ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶಿಸಿದ್ದಾರೆ. ಚಿತ್ರ 21 ಜನವರಿ 2022 ರಂದು ಬಿಡುಗಡೆಯಾಗಲಿದೆ.
__
Be the first to comment