ನಿರ್ದೇಶಕನಾದ ಪೃಥ್ವಿ ಅಂಬರ್

ಕನ್ನಡ ಚಿತ್ರರಂಗದಲ್ಲಿ ಲವ್ವರ್ ಬಾಯ್ ಆಗಿ ಗುರುತಿಸಿಕೊಂಡಿರುವ ನಟ ಪೃಥ್ವಿ ಅಂಬರ್ ಅವರು  ಮೊದಲ ಬಾರಿ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

ಪೃಥ್ವಿ ಅವರು ತಮ್ಮ ಮೊದಲ ಸಿನಿಮಾವನ್ನು  ತುಳು ಭಾಷೆಯಲ್ಲಿ ನಿರ್ದೇಶಿಸಲಿದ್ದಾರೆ. ತಮ್ಮ  ಸಿನಿಮಾಕ್ಕೆ ‘ಡೊಂಬರ’ ಎಂದು ಹೆಸರಿಟ್ಟಿದ್ದಾರೆ.

ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ಸರಳವಾಗಿ ಮುಗಿದಿದೆ. ಸಿನಿಮಾದ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಪೃಥ್ವಿ ಅಂಬರ್ ನಟಿಸಲಿದ್ದಾರೆ. ಪೃಥ್ವಿ ಅಂಬರ್ ಸಿನಿಮಾದ ಚಿತ್ರೀಕರಣವನ್ನು  ಕೆಲವೇ ತಿಂಗಳಲ್ಲಿ ಪ್ರಾರಂಭ ಮಾಡುವ ಯೋಚನೆಯಲ್ಲಿದ್ದಾರೆ.

ನಾನು ಇಂದು ಇರುವ ಹಂತ ತಲುಪುವಲ್ಲಿ ತುಳು ಭಾಷೆ ಮತ್ತು ಅಲ್ಲಿನ ಸಂಸ್ಕೃತಿ, ಆಚರಣೆಗಳ ಪ್ರಭಾವ ಇದೆ. ಕರಾವಳಿ ಸಂಸ್ಕೃತಿ ಮತ್ತು ತುಳು ಭಾಷೆಯ ಮೇಲೆ ನನಗೆ ಅಪಾರ ಗೌರವ, ಪ್ರೀತಿ ಇದೆ.  ನಾನು ನನ್ನ ಭಾಷೆಗೆ ಏನನ್ನಾದರು ಮರಳಿ ಕೊಡಬೇಕು ಎಂದು ಎಣಿಸಿದ್ದೆ. ಇದೇ ಕಾರಣಕ್ಕೆ  ಮೊದಲ ಸಿನಿಮಾವನ್ನು ತುಳು ಭಾಷೆಯಲ್ಲೇ ನಿರ್ದೇಶಿಸುತ್ತಿದ್ದೀನಿ ಎಂದಿದ್ದಾರೆ ಪೃಥ್ವಿ ಅಂಬರ್.

ಈ ಸಿನಿಮಾ ಕರಾವಳಿ ಪ್ರದೇಶದಲ್ಲಿ ವಾಸಿಸುವ ಒಂದು ಸಮುದಾಯದ ಕುಟುಂಬವೊಂದರ ಕತೆ  ಹೊಂದಿರಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕತೆಯಾಗಿದೆ.  ಕುಟುಂಬದಲ್ಲಿ ನಡೆಯುವ ಘಟನೆಯೊಂದು ಅವರನ್ನು ಅನಿರೀಕ್ಷಿತ ಪರಿಸ್ಥಿತಿಗಳಿಗೆ ತಳ್ಳುತ್ತದೆ. ಆಗ ಆ ಕುಟುಂಬ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಸಿನಿಮಾದ ಕತೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!