ರಜನಿಕಾಂತ್ ಗೆ ಪ್ರಧಾನಿ ಅಭಿನಂದನೆ

ತಮಿಳು ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ ರಜನಿಕಾಂತ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, ‘ ರಜನಿಕಾಂತ್ ಅವರ  ಅವರ ವೈವಿಧ್ಯಮಯ ಪಾತ್ರಗಳು  ಜನರ ಮನಸ್ಸಿನಲ್ಲಿ ಶಾಶ್ವತವಾದ ಪ್ರಭಾವ ಬೀರಿವೆ. ಮುಂಬರುವ ದಿನಗಳಲ್ಲಿ ಅವರಿಗೆ ನಿರಂತರ ಯಶಸ್ಸು ಮತ್ತು ಉತ್ತಮ ಆರೋಗ್ಯ ಸಿಗಲೆಂದು ಹಾರೈಸುತ್ತೇನೆ’ ಎಂದು ಹಾರೈಸಿದ್ದಾರೆ.

ರಜಿನಕಾಂತ್ ಮೋದಿಯವರ ಟ್ವೀಟ್ ಹಂಚಿಕೊಂಡು, ‘ಗೌರವಾನ್ವಿತ ಮೋದಿ ಜಿ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ಬಹಳ ಹಿಂದಿನಿಂದಲೂ ಅತ್ಯಂತ ಗೌರವದಿಂದ ಕಾಣುತ್ತಿರುವ ನಾಯಕನಿಂದ ಅಭಿನಂದನೆ ಸ್ವೀಕರಿಸುವುದು ನಿಜಕ್ಕೂ ಗೌರವದ ಸಂಗತಿ. ನಿಮ್ಮ ಮಾತುಗಳಿಗೆ ಧನ್ಯವಾದಗಳು. ಜೈ ಹಿಂದ್’  ಎಂದು ಹೇಳಿದ್ದಾರೆ.

ರಜನಿಕಾಂತ್ ನಟನೆಯ ಕೂಲಿ ಚಿತ್ರ  ಶುಕ್ರವಾರ  ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ನಟನಾಗಿ ರಜನಿಕಾಂತ್ ಅವರ 171ನೇ ಚಿತ್ರ ಇದಾಗಿದೆ.  ಚಿತ್ರದಲ್ಲಿ ಸತ್ಯರಾಜ್, ಶ್ರುತಿ ಹಾಸನ್, ಉಪೇಂದ್ರ,  ನಾಗಾರ್ಜುನ, ಪೂಜಾ ಹೆಗ್ಡೆ,   ಆಮಿರ್ ಖಾನ್ ಮುಂತಾದವರು ನಟಿಸಿದ್ದಾರೆ.

ತಮಿಳು ಚಿತ್ರರಂಗದ  ಯಶಸ್ವಿ ತಾರೆಯಾಗಿರುವ ರಜನಿಕಾಂತ್ (74)   ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

This Article Has 7 Comments
  1. Pingback: how to order androxal cheap uk buy purchase

  2. Pingback: cheap enclomiphene online mastercard accepted

  3. Pingback: how to order xifaxan cheap buy online no prescription

  4. Pingback: staxyn online without prescription canada

  5. Pingback: cheap dutasteride generic uk buy

  6. Pingback: fildena Canada order

  7. Pingback: levné kamagra na prodej bez nutnosti lékařského předpisu

Leave a Reply

Your email address will not be published. Required fields are marked *

Translate »
error: Content is protected !!