Present ಪ್ರಪಂಚ 0 % ಲವ್ ಸಿನಿಮಾ ನಾಳೆ ಬಿಡುಗಡೆ

ರೊಮ್ಯಾಂಟಿಕ್ ಥ್ರಿಲ್ಲರ್ ‘Present ಪ್ರಪಂಚ 0 % ಲವ್’ ಚಿತ್ರ ಮೇ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಅಭಿರಾಮ್ ನಿರ್ದೇಶಿಸಿರುವ ಚಲನಚಿತ್ರ ಆಧುನಿಕ ದಂಪತಿಯ ಜೀವನಶೈಲಿಯನ್ನು ತೋರಿಸಲಿದೆ. ಅವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹಾಸ್ಯದೊಂದಿಗೆ ತೆರೆಮೇಲೆ ಪ್ರಸ್ತುತ ಪಡಿಸಲಿದೆ.

ಕೋವಿಡ್‌ ರೋಗದ ಸಮಯದಲ್ಲಿ ಚಿತ್ರದ ನಿರ್ಮಾಣವು ಪೂರ್ಣಗೊಂಡಿತ್ತು. ಆದರೆ, ಚಿತ್ರ ತಂಡವು ನಾಯಕ ನಟರಲ್ಲಿ ಒಬ್ಬರಾದ ಅರ್ಜುನ್ ಮಂಜುನಾಥ್ ಮತ್ತು ನಿರ್ದೇಶಕ ಅಭಿರಾಮ್ ಅವರನ್ನು ಕೋವಿಡ್‌ ನಿಂದ ಕಳೆದುಕೊಂಡಿತು. ಬಳಿಕ ಈ ರೊಮ್ಯಾಂಟಿಕ್ ಥ್ರಿಲ್ಲರ್ ನ್ನು ಕೃಷ್ಣಮೂರ್ತಿ ಎಲ್ ಮತ್ತು ರವಿ ಕುಮಾರ್ ಎಚ್ಪಿ ಜಂಟಿಯಾಗಿ ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಯಶಸ್, ಅಭಿ, ಸಂಭ್ರಮ ಶ್ರೀ, ಓಂ ಪ್ರಕಾಶ್ ರಾವ್, ಎಸ್ ನಾರಾಯಣ್, ತಬಲಾ ನಾಣಿ, ಸಂಜನಾ ಆನಂದ್, ಚಂದನ್ ಆಚಾರ್ ಮತ್ತು ಗೋವಿಂದ ಗೌಡ ನಟಿಸಿದ್ದಾರೆ. ಚಿತ್ರಕ್ಕೆ ಕೆವಿ ರವಿಚಂದ್ರ ಅವರ ಸಂಗೀತ, ಈಶ್ವರಿ ಸುರೇಶ್ ಅವರ ಛಾಯಾಗ್ರಹಣವಿದೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!