ಸದ್ದು ಮಾಡುತ್ತಿದೆ “Present ಪ್ರಪಂಚ ೦% ಲವ್” ಚಿತ್ರದ ಪೋಸ್ಟರ್

PMP ಮೀಡಿಯಾ ಪ್ರೋಡಕ್ಷನ್ಸ್ ಲಾಂಛನದಲ್ಲಿ ಕೃಷ್ಣಮೂರ್ತಿ ಹಾಗೂ ರವಿಕುಮಾರ್ ಹೆಚ್.ಪಿ ಅವರು ನಿರ್ಮಿಸಿರುವ “Present ಪ್ರಪಂಚ ೦% ಲವ್” ಚಿತ್ರದ ಪೋಸ್ಟರ್ ಪ್ರೇಮಿಗಳ ದಿನದಂದು ಬಿಡುಗಡೆಯಾಗಿತ್ತು. ಆ ಪೋಸ್ಟರ್ ಸಾಮಾಜಿಕ ಜಾಲಾತಾಣದಲ್ಲಿ ಬಿಡುಗಡೆಯಾಗಿ ಅಪಾರ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ. ಈ ವರ್ಷದ ವಾರ್ಷಿಕ ಪರೀಕ್ಷೇಗಳು ಮುಗಿದ ನಂತರ ಚಿತ್ರ ತೆರೆಗೆ ಬರಲಿದೆ.

ಈ ಹಿಂದೆ ‘ಸಂಯುಕ್ತ ೨’ ಚಿತ್ರವನ್ನು ನಿರ್ದೇಶಿಸಿದ್ದ ಅಭಿರಾಮ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಾಮಿಡಿ, ಲವ್, ಸೆಂಟಿಮೆಟ್ ಹಾಗೂ ಕೌಟುಂಬಿಕ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಕೆ.ವಿ.ರವಿತೇಜಸ್ವಿ ಸಂಗೀತ ನೀಡಿದ್ದಾರೆ. ಈಶ್ವರಿ ಸುರೇಶ್ ಛಾಯಾಗ್ರಹಣ, ವೆಂಕಿ ಸಂಕಲನ, ಕುಂಚಂದ್ರು, ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಹಾಗೂ ಹರಿಕೃಷ್ಣ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಡಾ||ವಿ.ನಾಗೇಂದ್ರಪ್ರಸಾದ್ ಬರೆದಿದ್ದಾರೆ.

ಈ ಹಿಂದೆ ‘ಕೆಮಿಸ್ಟ್ರಿ ಕರಿಯಪ್ಪ’ ಹಾಗೂ ‘ಸಂಯುಕ್ತ ೨’ ಚಿತ್ರದ ನಿರ್ಮಾಪಕರಾಗಿದ್ದ ಅರ್ಜುನ್ ಮಂಜುನಾಥ್ ಈ ಚಿತ್ರದ ನಾಯಕ. ರಂಗಭೂಮಿ ಹಿನ್ನೆಲೆಯ ಯಶಸ್ ಅಭಿ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಸಂಭ್ರಮ ಶ್ರೀ, ಅಕ್ಷತ ಈ ಚಿತ್ರದ ನಾಯಕಿಯರು. ತಬಲನಾಣಿ, ಲಯೇಂದ್ರ, ಎಸ್.ನಾರಾಯಣ್ ಓಂಪ್ರಕಾಶ್‌ರಾವ್, ಚಂದನಾಚಾರ್, ಸಂಜನ, ಗೋವಿಂದೇಗೌಡ, ಉಮೇಶ್ ಪುಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

This Article Has 2 Comments
  1. Pingback: DevOps

  2. Pingback: sell cvv online

Leave a Reply

Your email address will not be published. Required fields are marked *

Translate »
error: Content is protected !!