‘Present ಪ್ರಪಂಚ ೦% ಲವ್` ಚಿತ್ರದ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ.

ಫ಼್ರೆಂಡ್ಸ್ ಮೀಡಿಯಾ ಪ್ರೋಡಕ್ಷನ್ಸ್ ಲಾಂಛನದಲ್ಲಿ ಕೃಷ್ಣಮೂರ್ತಿ ಹಾಗೂ ರವಿಕುಮಾರ್ ಹೆಚ್.ಪಿ ಅವರು ನಿರ್ಮಿಸುತ್ತಿರುವ present ಪ್ರಪಂಚ ೦% ಲವ್” ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಈ ಚಿತ್ರಕ್ಕಾಗಿ ಕೆ.ವಿ.ರವಿಚಂದ್ರ ಅವರು ಬರೆದಿರುವ ‘ಸ್ವರ್ಗವೆಂದರೆ‘ ಸಿರಿಗನ್ನಡ ನಾಡು. ಕಲ್ಪವೃಕ್ಷಕ್ಕೆ ತಾಯಿನಾಡಿದು ನೋಡು‘ ಎಂಬ ಹಾಡಿನ ಲಿರಿಕಲ್ ವಿಡಿಯೋ ನವಂಬರ್೧ರ ಕನ್ನಡ ರಾಜ್ಯೋತ್ಸವದಂದು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಲಿದೆ.  ಖ್ಯಾತ ಗಾಯಕ ಶಂಕರ್‌ಮಹದೇವನ್ ಈ ಹಾಡನ್ನು ಹಾಡಿದ್ದಾರೆ.

ಈ ಹಿಂದೆ ‘ಸಂಯುಕ್ತ 2’ ಚಿತ್ರವನ್ನು ನಿರ್ದೇಶಿಸಿದ್ದ ಅಭಿರಾಮ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಾಮಿಡಿ, ಲವ್, ಸೆಂಟಿಮೆಂಟ್ ಹಾಗೂ ಕೌಟುಂಬಿಕ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಕೆ.ವಿ.ರವಿಚಂದ್ರ ಸಂಗೀತ ನೀಡಿದ್ದಾರೆ. ಈಶ್ವರಿ ಸುರೇಶ್ ಛಾಯಾಗ್ರಹಣ, ವೆಂಕಿ ಸಂಕಲನ, ಕುಂಫ಼ು ಚಂದ್ರು, ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಹಾಗೂ ಹರಿಕೃಷ್ಣ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಡಾ||ವಿ.ನಾಗೇಂದ್ರಪ್ರಸಾದ್ ಬರೆದಿದ್ದಾರೆ.

ಈ ಹಿಂದೆ’ಕೆಮಿಸ್ತ್ರಿ ಕರಿಯಪ್` ಹಾಗೂ ‘ಸಂಯುಕ್ತ 2` ಚಿತ್ರದ ನಿರ್ಮಾಪಕರಾಗಿದ್ದ ಅರ್ಜುನ್ ಮಂಜುನಾಥ್ ಈ ಚಿತ್ರದ ನಾಯಕ. ರಂಗಭೂಮಿ ಹಿನ್ನೆಲೆಯ ಯಶಸ್ ಅಭಿ ಈ ಚಿತ್ರದ ದ್ವಿತೀಯ ನಾಯಕ  ಸಂಭ್ರಮ ಶ್ರೀ, ಅಕ್ಷತ ಈ ಚಿತ್ರದ ನಾಯಕಿಯರು.  ತಬಲನಾಣಿ, ಲಯೇಂದ್ರ, ಎಸ್.ನಾರಾಯಣ್, ಓಂಪ್ರಕಾಶ್‌ರಾವ್, ಚಂದನಾಚಾರ್, ಸಂಜನ, ಗೋವಿಂದೇಗೌಡ, ಉಮೇಶ್ ಪುಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

https://youtu.be/bkVgjELL5lU

This Article Has 1 Comment
  1. Pingback: slot online terpercaya sultan play

Leave a Reply

Your email address will not be published. Required fields are marked *

Translate »
error: Content is protected !!