ಶಶಿ ನಾಯಕ ನಟ ಆಗಿ ನಟಿಸಿರುವ ಪ್ರೇಮಿಗಳ ಗಮನಕ್ಕೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಕೊರೋನಾ ಸಮಯದಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ನಾಯಕ ಹಾಗೂ ನಾಯಕಿ ಒಂದೇ ಮನೆಯಲ್ಲಿ ವಾಸ ಮಾಡುತ್ತಾರೆ. ಆಗ ಅಲ್ಲಿಗೆ ಆಗಂತುಕನ ಪ್ರವೇಶ ಆಗುತ್ತದೆ. ಅವನು ಪ್ರೇಮಿಗಳಿಗೆ ಸಾಕಷ್ಟು ತೊಂದರೆ ಮಾಡುತ್ತಾನೆ. ಈ ತೊಂದರೆಯಿಂದ ಅವರು ಹೇಗೆ ಹೊರಗೆ ಬರುತ್ತಾರೆ ಎನ್ನುವ ಕಥೆ ಟ್ರೈಲರ್ ನಲ್ಲಿದೆ.
ಚಿತ್ರದಲ್ಲಿ ನಾಯಕಿಯಾಗಿ ಚಿರಶ್ರೀ ಅವರು ನಟಿಸಿದ್ದಾರೆ. ನಿರ್ಮಾಪಕರಲ್ಲಿ ಒಬ್ಬರಾದ ಸುಬ್ಬು ಅವರು ಖಳನಾಯಕ ಆಗಿ ನಟಿಸಿದ್ದಾರೆ. ರಾಜಶೇಖರ ರೆಡ್ಡಿ ಅವರು ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಚಿತ್ರವನ್ನು ವಿನ್ಸೆಂಟ್ ಇನ್ಬರಾಜ್ ಅವರು ನಿರ್ದೇಶಿಸಿದ್ದಾರೆ.

ಚಿತ್ರವನ್ನು ಬೆಂಗಳೂರಿನ ಉತ್ತರಹಳ್ಳಿಯ ಮನೆಯೊಂದರಲ್ಲಿ ಬಹುಪಾಲು ಚಿತ್ರೀಕರಣ ಮಾಡಲಾಗಿದೆ. ಇದು ತಮಿಳುನಾಡಿನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ ಎಂದು ಚಿತ್ರತಂಡ ಹೇಳಿದೆ.
ಶಶಿ ಅವರ ಮೂರನೆಯ ಚಿತ್ರ ಇದಾಗಿದೆ. ಈ ಚಿತ್ರ ಯುವಕರಿಗೆ ಕನೆಕ್ಟ್ ಆಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರೇಮಿಗಳ ಗಮನಕ್ಕೆ ಚಿತ್ರ ಶೀಘ್ರವೇ ತೆರೆಗೆ ಬರಲು ಸಿದ್ಧತೆ ನಡೆಸಿದೆ.






Be the first to comment