Krishnam Pranaya Sakhi Movie Review: ಪ್ರೇಮಮಯ ‘ಕೃಷ್ಣಂ ಪ್ರಣಯ ಸಖಿ’

ಚಿತ್ರ: ಕೃಷ್ಣಂ ಪ್ರಣಯ ಸಖಿ
ನಿರ್ದೇಶನ: ಶ್ರೀನಿವಾಸ ರಾಜು
ನಿರ್ಮಾಣ: ಪ್ರಶಾಂತ್ ರುದ್ರಪ್ಪ
ತಾರಾಗಣ: ಗಣೇಶ್, ಮಾಳವಿಕಾ ನಾಯರ್, ಶರಣ್ಯ ಶೆಟ್ಟಿ, ಶಶಿಕುಮಾರ್, ಶೃತಿ , ರಂಗಾಯಣ ರಘು, ಸಾಧು ಕೋಕಿಲ ಇತರರು
ರೇಟಿಂಗ್: 4

ಕೂಡು ಕುಟುಂಬದಲ್ಲಿ ಹುಟ್ಟಿದ ನಾಯಕನ ಪ್ರೇಮ ಕಥೆಯ ಚಿತ್ರ ಈ ವಾರ ತೆರೆಗೆ ಬಂದಿರುವ ಕೃಷ್ಣಂ ಪ್ರಣಯ
ಸಖಿ.

ಈ ಚಿತ್ರದ ಕಥೆಯನ್ನು ಹೇಳುವುದು ಸುಲಭವಿಲ್ಲ. ಅನಾಥೆಯನ್ನು ಇಷ್ಟಪಡುವ ನಾಯಕನ ಬದುಕು ಪ್ರೇಕ್ಷಕರು ನಿರೀಕ್ಷೆ ಮಾಡಿದಂತೆ ಸಾಗುವುದಿಲ್ಲ. ಅಲ್ಲಿ ಟ್ವಿಸ್ಟ್ ಕಂಡು ಬರುತ್ತದೆ. ಇದನ್ನು ತಿಳಿಯಲು ಚಿತ್ರವನ್ನು ನೋಡಬೇಕು.

ಗಣೇಶ್ ಅವರು ಕೃಷ್ಣನ ಪಾತ್ರದ ಜೊತೆಗೆ ಇಡೀ ಚಿತ್ರದ ಭಾರವನ್ನು ಹೊತ್ತಿದ್ದಾರೆ. ಚೆಲುವು ಹಾಗೂ ನಟನೆಯಿಂದ ನಾಯಕಿ ಮಾಳವಿಕಾ ನಾಯರ್ ಇಷ್ಟವಾಗುತ್ತಾರೆ. ವಿಚಿತ್ರ ಕಲ್ಪನೆಯ ಕಥೆಗೆ ಇವರಿಬ್ಬರು ಜೀವ ತುಂಬುವ ಯತ್ನ ಮಾಡಿದ್ದಾರೆ.

ಸಾಧು ಹಾಗೂ ರಂಗಾಯಣ ರಘು ತಮ್ಮ ನಟನೆಯಿಂದ ಪ್ರೇಕ್ಷಕರನ್ನು ರಂಜಿಸುತ್ತಾರೆ. ಕುರಿ ಪ್ರತಾಪ್ ಕೂಡ ತಮ್ಮ ಹಾಸ್ಯದ ಮೂಲಕ ಗಮನ ಸೆಳೆಯುತ್ತಾರೆ. ಶರಣ್ಯ ತಮ್ಮ ಮಾದಕತೆಯಿಂದ ಪ್ರೇಕ್ಷಕರ ಮನ ಗೆಲ್ಲುತ್ತಾರೆ.

ಅರ್ಜುನ್ ಜನ್ಯ ತಮ್ಮ ಹಾಡುಗಳ ಮೂಲಕ ಚಿತ್ರವನ್ನು ಹಿಟ್ ಕಡೆಗೆ ಕೊಂಡೊಯ್ಯುವ ಯತ್ನ ಮಾಡಿದ್ದಾರೆ. ಪ್ರೇಕ್ಷಕರಿಗೆ ಮೊದಲಾರ್ಧ ತಲೆ ಕೆರೆದುಕೊಳ್ಳುವಂತೆ ಮಾಡಿದರೂ, ಚಿತ್ರದ ದ್ವಿತೀಯಾರ್ಧ ನಕ್ಕು ನಗಿಸುತ್ತದೆ. ಗಣೇಶ ಅಭಿಮಾನಿ ಹಾಗೂ ಫ್ಯಾಮಿಲಿ ಚಿತ್ರಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಖುಷಿ ನೀಡಬಲ್ಲದು.

ಕೃಷ್ಣಂ ಪ್ರಣಯ ಸಖಿ

Be the first to comment

Leave a Reply

Your email address will not be published. Required fields are marked *

Translate »
error: Content is protected !!