ಬಹುನಿರೀಕ್ಷಿತ ‘ಪ್ರೇಮಲೋಕ 2’ ಚಿತ್ರದ ಶೂಟಿಂಗ್ ವಿಳಂಬಕ್ಕೆ ಕಾರಣ ಬಹಿರಂಗವಾಗಿದೆ.
ಕಳೆದ ವರ್ಷ ಮೇ ತಿಂಗಳಲ್ಲೇ ಸಿನಿಮಾದ ಶೂಟ್ ಆರಂಭ ಆಗಬೇಕಿತ್ತು. ಈಗ ಸಿನಿಮಾ ವಿಳಂಬಕ್ಕೆ ರವಿಚಂದ್ರನ್ ಅವರು ಕಾರಣ ವಿವರಿಸಿದ್ದಾರೆ. 24 ಹಾಡುಗಳನ್ನು ಒಳಗೊಂಡಿರುವ ಚಿತ್ರಕ್ಕೆ ಜನಸಂದಣಿಯ ನಿಯಂತ್ರಣ ಮತ್ತು ಸೂಕ್ತ ಸ್ಥಳ ಸಿಗದಿರುವುದು ಶೂಟಿಂಗ್ ವಿಳಂಬಕ್ಕೆ ಕಾರಣ ಎಂದಿದ್ದಾರೆ.
‘ಹಾಡು ಸಿದ್ಧವಾಗಿದೆ, ಲೊಕೇಶನ್ ಸಿದ್ಧವಾಗುತ್ತಿಲ್ಲ. ಸಿನಿಮಾದ ಎಲ್ಲಾ 24 ಹಾಡುಗಳು ರೆಡಿ ಇವೆ. ಇದು ಜನರ ಮಧ್ಯೆ ನಡೆಯುವ ಕಥೆ. ಶೂಟಿಂಗ್ಗೆ ಜನರು ಕೋ ಆಪರೇಟ್ ಮಾಡಬೇಕು. ರಸ್ತೆಗಳ ಮಧ್ಯೆ ನಡೆಯುವ ಕಥೆ ಆದ್ದರಿಂದ ಟ್ರಾಫಿಕ್ನಲ್ಲಿ ಸಿನಿಮಾ ಶೂಟ್ ಮಾಡೋದು ಕಷ್ಟ. ನಾವು ಎರಡು-ಮೂರು ಬಾರಿ ಪ್ರಯತ್ನ ಮಾಡಿದೆವು. ಜನರ ಕಂಟ್ರೋಲ್ ಮಾಡೋಕೆ ಆಗಿಲ್ಲ’ ಎಂದಿದ್ದಾರೆ ರವಿಚಂದ್ರನ್.
‘ನಾವು ಅಂದುಕೊಂಡಂತೆ ಹಾಡುಗಳ ಚಿತ್ರೀಕರಣ ಮಾಡಲಾಗುತ್ತಿಲ್ಲ. ಒಂದು ಊರನ್ನೇ ಕಟ್ಟಬೇಕಾಗಿ ಬರಹುದು. ಅದಕ್ಕೊಂದು ಜಾಗವನ್ನು ನಾವೇ ಸೃಷ್ಟಿ ಮಾಡಬೇಕಿದೆ’ ಎಂದಿದ್ದಾರೆ.
ಪ್ರೇಮಲೋಕ’ ಚಿತ್ರದಲ್ಲಿ 11 ಹಾಡುಗಳು ಇದ್ದವು. ಸಾಂಗ್ ಬಗ್ಗೆ ತಿಳಿದ ಬಳಿಕ ಅನೇಕರು ನಿರ್ಮಾಣದಿಂದ ಹಿಂದೆ ಸರಿದಿದ್ದರು. ಬಳಿಕ ರವಿಚಂದ್ರನ್ ಅವರೇ ಈ ಚಿತ್ರ ನಿರ್ಮಾಣ ಮಾಡಿ ಗೆಲುವು ಕಂಡರು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಮಾಡುತ್ತಿದ್ದಾರೆ.





Be the first to comment