ಪ್ರೇಮಕ್ಕೆ ಕಣ್ಣಿಲ್ಲಾ’ ಸಾಂಗ್ ರಿಲೀಸ್ ಮಾಡಿದ ಸಖತ್ ಚಿತ್ರತಂಡ

ನಿರ್ದೇಶಕ ಸಿಂಪಲ್ ಸುನಿ, ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಶನ್ ನಲ್ಲಿ ಬರ್ತಿರುವ ಎರಡನೇ ಸಿನಿಮಾ ಸಖತ್. ಟೈಟಲ್ ನಂತೆ ಸಖತ್ ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾ ಸಖತ್. ಸದ್ಯ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಮೊದಲ ‘ಪ್ರೇಮಕ್ಕೆ ಕಣ್ಣಿಲ್ಲಾ’ ಎಂಬ ಹಾಡನ್ನು ಬಿಡುಗಡೆ ಮಾಡಿದೆ.

ರೊಮ್ಯಾಂಟಿಕ್ ಕಾಮಿಡಿ ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಚಿತ್ರ ಸಖತ್. ಟಿವಿ ರಿಯಾಲಿಟಿ ಶೋ ಹಾಗೂ ಕೋರ್ಟ್ ಕೇಸ್ ಸುತ್ತ ಸಿನಿಮಾ ಕಥೆ ಹೆಣೆಯಲಾಗಿದೆ. ಇಲ್ಲಿವರೆಗೆ ಭಿನ್ನ ಪಾತ್ರಗಳ ಮೂಲಕ ರಂಜಿಸುತ್ತಿದ್ದ ಗೋಲ್ಡನ್ ಸ್ಟಾರ್ ಈ ಚಿತ್ರದಲ್ಲಿ ಚಾಲೆಂಜಿಂಗ್ ರೋಲ್ ನಲ್ಲಿ ಅಭಿನಯಿಸುತ್ತಿದ್ದಾರೆ.

ಅಂಧ ಗಾಯಕನ ಪಾತ್ರಕ್ಕೆ ಜೀವ ತುಂಬಿರುವ ಗೋಲ್ಡನ್ ಸ್ಟಾರ್ ರಿಯಾಲಿಟಿ ಶೋ ಸ್ವರ್ಧಿಯಾಗಿ ಕಾಣಸಿಗಲಿದ್ದಾರೆ. ನಿಶ್ವಿಕಾ ನಾಯ್ಡು ಹಾಗೂ ಹೊಸ ಪ್ರತಿಭೆ ಸುರಭಿ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.

ಚಿತ್ರಕ್ಕೆ ನಿಶಾ ವೆಂಕಟ್ ಕೋನನ್ಕಿ, ಭರಾಟೆ ಖ್ಯಾತಿಯ ಸುಪ್ರಿತ್ ಬಂಡವಾಳ ಹೂಡಿದ್ದು, ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ನವೆಂಬರ್ ಅಂತ್ಯದಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!