ಜೀ಼ ಕನ್ನಡ ಅಂದ್ರೆ ಮನರಂಜನೆ, ಮನರಂಜನೆ ಅಂದ್ರೆ ಜೀ಼ ಕನ್ನಡ. ಈಗ ನಿಮ್ಮನ್ನು ಮನರಂಜಿಸಲು ಜೀ಼ ಕನ್ನಡ ಮತ್ತೊಂದು ಗುಡ್ ನ್ಯೂಸ್ ಹೊತ್ತುತಂದಿದೆ. ಹೌದು, ತೆಲುಗಿನಲ್ಲಿ ತೆರೆಕಂಡ ದಗ್ಗುಬಾಟಿ ವೆಂಕಟೇಶ್ ನಟಿಸಿದ ಸೂಪರ್ ಹಿಟ್ ಸಿನೆಮಾ ಪ್ರೇಮ ಸಂಕ್ರಾಂತಿ ಏಪ್ರಿಲ್ 22 ರಂದು ಸಂಜೆ 4:30 ಕ್ಕೆ ಮೊದಲ ಬಾರಿಗೆ ಕನ್ನಡಿಗರನ್ನು ಮನರಂಜಿಸಲು ಜೀ಼ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ.
ಅಮೆರಿಕಾದ ರಿಚ್ ಬಿಸಿನೆಸ್ ಮ್ಯಾನ್ ದೊಡ್ಡ ಕಂಪನಿ ಸಿಇಓ ಸತ್ಯ ಹೈದರಾಬಾದ್ ಗೆ ಬರ್ತಾನೆ. ಆತನನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸಬೇಕಾಗಿರುವುದು ಮುಖ್ಯಮಂತ್ರಿ ಜವಾಬ್ದಾರಿ ಆಗಿರುತ್ತದೆ. ಅಷ್ಟರಲ್ಲಿ ಆತನನ್ನು ಬಿಜು ಪಾಂಡೆ ಅಪಹರಿಸುತ್ತಾನೆ ಮತ್ತು ಆತ ತನ್ನ ಸದಸ್ಯ ಪಾಪ ಪಾಂಡೆಯನ್ನು ಆತನಿಗೆ ಒಪ್ಪಿಸಿದರೆ ಮಾತ್ರ ಸತ್ಯನನ್ನು ಬಿಟ್ಟುಕೊಡುವುದಾಗಿ ಬ್ಲಾಕ್ಮೇಲ್ ಮಾಡ್ತಾನೆ. IPS ಆಫೀಸರ್ ಮೀನಾಕ್ಷಿ ಸತ್ಯನನ್ನು ಬಿಡಿಸುವ ಜವಾಬ್ದಾರಿಯನ್ನು ಒಪ್ಪಿಕೊಂಡಿರುತ್ತಾಳೆ. ಇದಕ್ಕೆ ತನ್ನ ಮಾಜಿ ಪ್ರಿಯಕರ ಸಸ್ಪೆನ್ಡ್ ಆಗಿರೋ ಡಿಸಿಪಿ ರಾಜುವಿನ ನೆರವು ಕೇಳ್ತಾಳೆ. ಆದ್ರೆ ರಾಜು ಹಳೆಯದೆಲ್ಲವನ್ನು ಮರೆತು ಹೆಂಡ್ತಿ ಮಕ್ಕಳ ಜೊತೆ ಸುಖವಾಗಿ ಬಾಳ್ತಿರ್ತಾನೆ. ಮೀನಾಕ್ಷಿ ರಾಜುವನ್ನು ಹೇಗೆ ಒಪ್ಪಿಸ್ತಾಳೆ? ರಾಜು ಸತ್ಯನ ರಕ್ಷಣೆ ಮಾಡ್ತಾನಾ ಅನ್ನೋದೇ ಈ ಸಿನೆಮಾದ ಹಂದರ.
ಅನಿಲ್ ರಾವಿಪುಡಿ ನಿರ್ದೇಶಿಸಿ ದುಗ್ಗುಬಾಟಿ ವೆಂಕಟೇಶ್ ನಾಯಕನಟನಾಗಿ ನಟಿಸಿರುವ ಪ್ರೇಮ ಸಂಕ್ರಾಂತಿ ಚಿತ್ರದಲ್ಲಿ ಐಶ್ವರ್ಯ ರಾಜೇಶ್, ಮೀನಾಕ್ಷಿ ಚೌಧರಿ, ನರೇಶ್, ಸಾಯಿ ಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಸಿನೆಮಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಆಗಿದ್ದು, ದುಗ್ಗುಬಾಟಿ ವೆಂಕಟೇಶ್, ಐಶ್ವರ್ಯ ರಾಜೇಶ್ ಹಾಗು ಮೀನಾಕ್ಷಿ ಅವರ ಸಕತ್ ಅಭಿನಯ ಪ್ರೇಕ್ಷಕರನ್ನು ಮನಸೂರೆಗೊಳಿಸುವಲ್ಲಿ ಸಂಶಯವಿಲ್ಲ.
ರಾಜು ಸತ್ಯನನ್ನು ಹೇಗೆ ರಕ್ಷಣೆ ಮಾಡ್ತಾನೆ? ಮಾಜಿ ಪ್ರೇಯಸಿ ಮತ್ತು ಹೆಂಡ್ತಿ ಮದ್ಯೆ ತಗಲಾಕಿಕೊಂಡು ಹೇಗೆ ಒದ್ದಾಡ್ತಾನೆ ಅಂತ ತಿಳ್ಕೊಳೋಕೆ ವೀಕ್ಷಿಸಿ ‘ಪ್ರೇಮ ಸಂಕ್ರಾಂತಿ’ ಇದೇ 27 ರಂದು ಸಂಜೆ 4:30 ಕ್ಕೆ.

Be the first to comment