ಸ್ಯಾಂಡಲ್ವುಡ್ ನಲ್ಲಿ ಮಿಂಚಿದ್ದ ನಾಯಕ ನಟಿ ಪ್ರೇಮಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ!
ಪ್ರೇಮಾ ಜನವರಿ 6, 1977ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರು ಕೊಡವ ಜನಾಂಗಕ್ಕೆ ಸೇರಿದ್ದು, ನೆರವಂಡ ಮನೆತನದವರು. ಇಂದು ಪ್ರೇಮಾ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
ಪ್ರೇಮಾ 1995ರಲ್ಲಿ ‘ಸವ್ಯಸಾಚಿ’ ಚಿತ್ರದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಶಿವರಾಜ್ ಕುಮಾರ್ ನಾಯಕನಟ ಆಗಿದ್ದರು. 1996ರಲ್ಲಿ ಬಿಡುಗಡೆಯಾದ ‘ಓಂ’ ಚಿತ್ರದಿಂದ ಪ್ರೇಮಾ ಸಾಕಷ್ಟು ಹೆಸರು ಮಾಡಿದರು. ಓಂ ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.
ವಿಷ್ಣುವರ್ಧನ್, ಶಿವರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ, ರಮೇಶ್ ಅರವಿಂದ್, ಸಾಯಿಕುಮಾರ್, ಮಲಯಾಳಮ್ಮಿನ ಮೋಹನ್ ಲಾಲ್ ಅವರೊಡನೆ ನಟಿಸಿರುವ ಪ್ರೇಮಾ ಸುಮಾರು 50 ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ನಟಿ ಎಂದು ಪ್ರಸಿದ್ಧಿ ಆಗಿರುವ ಪ್ರೇಮಾ, ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.
__
Be the first to comment