ಕನ್ನಡ ಸಿನಿಮಾಗಳಿಗೆ ಮಲ್ಟಿಫ್ಲೆಕ್ಸ್ ಗಳಲ್ಲಿ ಹೆಚ್ಚು ಸೌಂಡ್ ಕೊಡುವುದಿಲ್ಲ ಎಂದು ಆರೋಪ ಮಾಡಿ ನಿರ್ದೇಶಕ ಪ್ರೇಮ್ ಅವರು ಫಿಲ್ಮ್ ಚೇಂಬರ್ ಮೊರೆ ಹೋಗಿದ್ದಾರೆ.
ʼʼಮಲ್ಟಿಪ್ಲೆಕ್ಸ್ ಗಳಲ್ಲಿ ತೆಲುಗು, ತಮಿಳು, ಇಂಗ್ಲೀಷ್ ಸಿನಿಮಾಗಳಿಗೆ 7 ಸೌಂಡ್ ಪಾಯಿಂಟ್ ಇರುತ್ತದೆ. ಆದರೆ ಕನ್ನಡ ಸಿನಿಮಾಗೆ ಕೇವಲ 4 ಸೌಂಡ್ ಪಾಯಿಂಟ್ ಮಾತ್ರ ಇಡುತ್ತಾರೆ .ಸೌಂಡ್ನಲ್ಲಿ ವ್ಯತ್ಯಾಸ ಮಾಡಿದಾಗ ಸಿನಿಮಾ ನೋಡಲು ಮಜಾ ಸಿಗುವುದಿಲ್ಲ. ವಿಲನ್ ಸಮಯದಲ್ಲೂ ಹೀಗೆ ಆಗಿತ್ತುʼʼ ಎಂದು ಜೋಗಿ ಪ್ರೇಮ್ ಆರೋಪ ಮಾಡಿದ್ದಾರೆ.
ಫೆಬ್ರವರಿ 24ಕ್ಕೆ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾ ರಿಲೀಸ್ ಆಗುತ್ತಿದೆ. ಈಗ ಈ ಚಿತ್ರಕ್ಕೆ ಈ ಸಮಸ್ಯೆ ಆಗುತ್ತಿದೆ ಎಂದು ಪ್ರೇಮ್ ಆರೋಪ ಮಾಡಿದ್ದಾರೆ.
ʼʼ’ಏಕ್ ಲವ್ ಯಾ’ ಸಿನಿಮಾದ ಹಾಡು ಹಾಗೂ ಬ್ಯಾಕ್ಗ್ರೌಂಡ್ ಮ್ಯೂಸಿಕ್ಗಾಗಿ ಒಂದೂವರೆ ಕೋಟಿಯಷ್ಟು ಹಣವನ್ನು ಖರ್ಚು ಮಾಡಲಾಗಿದೆ. ಇಷ್ಟೆಲ್ಲಾ ಖರ್ಚು ಮಾಡಿದರೂ ಮಲ್ಟಿಫ್ಲೆಕ್ಸ್ ನಲ್ಲಿ ಸೌಂಡ್ ಯಾಕೆ ಕೊಡುವುದಿಲ್ಲ? ʼʼ ಎಂದು ಪ್ರೇಮ್ ಪ್ರಶ್ನೆ ಮಾಡಿದ್ದಾರೆ.
ದೂರು ಈಗ ಫಿಲ್ಮ್ ಚೇಂಬರ್ ಅಧ್ಯಕ್ಷ ಜೈ ರಾಜ್ ಅವರಿಗೆ ತಲುಪಿದೆ. ಈ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಪ್ರೇಮ್ ಮನವಿ ಮಾಡಿದ್ದಾರೆ. ‘ ಏಕ್ ಲವ್ ಯಾ’ ಸಿನಿಮಾದಲ್ಲಿ ರಾಣಾ ಹಾಗೂ ರಚಿತಾ ರಾಮ್, ಗ್ರೀಷ್ಮಾ ನಾಣಯ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಕ್ಷಿತಾ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ.
___
Be the first to comment