ತಾಯಿಗೆ ಬೈದರೆ ಸುಮ್ಮನಿರುತ್ತಾರಾ? ಎಂದ ಪ್ರೇಮ್

‘ತಾಯಿಗೆ ಬೈದರೆ ಸುಮ್ಮನಿರುತ್ತಾರಾ?’ ಎಂದು ಪ್ರೇಮ್, ಕಮಲ್ ಹಾಸನ್ ಅವರ  ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ನೀಡದೇ ಇರುವ ತಮಿಳು ಮಾಧ್ಯಮಗಳ ಪ್ರಶ್ನೆಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ್ದಾರೆ.

ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ‘ಕೆಡಿ’ ಚಿತ್ರತಂಡ ಚೆನ್ನೈನಲ್ಲಿ  ಸುದ್ದಿಗೋಷ್ಠಿ ನಡೆಸಿತು. ಈ ವೇಳೆ  ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಯಿಂದ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ನೀಡದೇ ಇರುವ ತಮಿಳು ಮಾಧ್ಯಮಗಳ ಪ್ರಶ್ನೆಗೆ ಕನ್ನಡದಲ್ಲಿಯೇ ಪ್ರೇಮ್ ಉತ್ತರಿಸಿದರು.

‘ನಾವೇನು ಬೇರೆ ದೇಶದಲ್ಲಿಲ್ಲ. 200-300  ಕಿ.ಮೀ. ದೂರದಲ್ಲಿದ್ದೇವೆ ಅಷ್ಟೇ. ಎಲ್ಲರೂ ಒಂದೇ. ತಾಯಿಗೆ ಯಾರಾದರೂ ಬೈದರೆ ಸುಮ್ಮನಿರುತ್ತಾರಾ?’ ಎಂದು ಪ್ರಶ್ನಿಸಿದರು.

‘ಕರ್ನಾಟಕದಲ್ಲಿ ಎಲ್ಲಾ ತಮಿಳು ಸಿನಿಮಾಗಳು ಚೆನ್ನಾಗಿ ಓಡುತ್ತವೆ. ನಾನೂ ತಮಿಳು ಸಿನಿಮಾಗಳನ್ನು ನೋಡುತ್ತೇನೆ. ಕರ್ನಾಟಕದಲ್ಲಿ ತಮಿಳು ಸಿನಿಮಾಗಳ ಬಿಡುಗಡೆಗೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಕಮಲ್ ಸರ್ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದೆ. ಹಾಗಾಗೀ ಅವರ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತವಾಯಿತು. ಕಮಲ್ ಸರ್ ಕ್ಷಮೆ ಕೇಳಬೇಕಿತ್ತು’ ಎಂದರು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕನ್ನಡಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!