ಪ್ರೀತಿ ಅನ್ನೊ ದ್ಯಾವ್ರು

‘ಪ್ರೀತಿ ಅನ್ನೊ ದ್ಯಾವ್ರು ವಿಡಿಯೋ‌’ ಆಲ್ಬಂ ಲೋಕಾರ್ಪಣೆ

ಚಿತ್ರರಂಗದಲ್ಲಿ 16ನೇ ವಸಂತಕ್ಕೆ ಹೆಜ್ಜೆಯಿಟ್ಟಿರೋ ರಾಗನಿಧಿ ಅನೂಪ್ ಸೀಳಿನ್, ಇದೇ ಮೊದಲ ಬಾರಿಗೆ ಚೊಚ್ಚಲ‌ ಮ್ಯೂಸಿಕ್ ವಿಡಿಯೋ‌ ಹಾಡೊಂದನ್ನ ಮಾಡಿದ್ದಾರೆ.

ಈ ಹಾಡನ್ನ ಅನೂಪ್ ಸೀಳಿನ್ ಮಡದಿ ಕೃತಿ ಶೆಟ್ಟಿಯವ್ರು ಲಾಂಚ್ ಮಾಡಿದ್ರು. ಪ್ರೀತಿ ಅನ್ನೊ ದ್ಯಾವ್ರು ಅನ್ನೋ ಶೀರ್ಷಿಕೆಯ ಈ ಹಾಡಿಗೆ ರಾಗ ಸಂಯೋಜಿಸಿ, ಹಾಡೋದ್ರ ಜೊತೆ ಖುದ್ದು ತಾವೇ ಅಭಿನಯಿಸಿದ್ದಾರೆ.

ನಾಲ್ಕಾರು ಆಯಾಮಗಳಲ್ಲಿ ಕಾಣೋ ಕೇಳೋ ಪ್ರೀತಿ ಅನ್ನೊ ದ್ಯಾವ್ರು ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಅನೂಪ್ ಸೀಳಿನ್ ಶ್ರೀಮತಿ ಕೃತಿ ಬಿ ಶೆಟ್ಟಿ ಈ ವಿಡಿಯೋ ಆಲ್ಬಂ ಹಾಡನ್ನ ನಿರ್ಮಿಸಿದ್ದಾರೆ.

ಸುಜ್ಞಾನ್ ಮೂರ್ತಿ‌ ಛಾಯಾಗ್ರಹಣ  ಕಾರ್ತಿಕ್ ಬಿ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದು, ಮನು ಎಸ್ ಗೌಡ ಸಂಕಲನ ಮಾಡಿದ್ದಾರೆ.

ಪ್ರೀತಿ ಅನ್ನೊ ದ್ಯಾವ್ರು

ಈ ಥರದ ಮ್ಯೂಸಿಕ್ ಆಲ್ಬಂ‌ ಆಸೆ ಮೊದಲಿಂದ ಇತ್ತು.. ಇಲ್ಲಿಂದ ಇದು ಆರಂಭ ಆಗಿದೆ.. ಗುರುಗಳಾದ ಹಂಸಲೇಖರನ್ನ ಸ್ಮರಿಸುತ್ತಾ, ಪ್ರೀತಿ ಅನ್ನೋ ದ್ಯಾವ್ರು ಮನುಷ್ಯ ಮತ್ತು ಪ್ರಕೃತಿ ನಡುವಿನ ಥೀಮ್ ಇರೋ‌ ಕಾನ್ಸೆಪ್ಟ್ ಹುಟ್ಟಿಂದ ಸಾವಿನ ವರೆಗೆ ಒಂದಷ್ಟು ವಿಚಾರಗಳನ್ನ ಈ ಹಾಡಿನ ಮೂಲಕ ಹೇಳಲಾಗಿದೆ.

ಜೆಪಿ ಮ್ಯೂಸಿಕ್ ಗೆ ದಶಕದ ಸಂಭ್ರಮ

ತಮ್ಮ ಮ್ಯೂಸಿಕ್ ಲೇಬಲ್ ಜೆಪಿ ಮ್ಯೂಸಿಕ್ ಹತ್ತನೇ ವರ್ಷಕ್ಕೆ ಕಾಲಿಟ್ಟ ಈ ಘಳಿಗೆಯಲ್ಲಿ ಅನೂಪ್ ವೃತ್ತಿ ಬದುಕಿನಲ್ಲೇ ಮೊಟ್ಟ ಮೊದಲ ಬಾರಿಗೆ ಇಂಥ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಈ ಪ್ರಯೋಗವನ್ನ ಜೆಪಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದಾರೆ. ಯುಟ್ಯೂಬ್ ಜೊತೆಗೆ  ಎಲ್ಲಾ ಮ್ಯೂಸಿಕ್ ಪ್ಲಾಟ್ ಫಾರಾಂಗಳಲ್ಲೂ ಈ ಹಾಡಿನ ಆಡಿಯೋ ಲಭ್ಯವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!