ಮೇ ಮೊದಲ ವಾರ ‘ಪ್ರೀತಿ ಪ್ರೇಮ ಪಂಗನಾಮ’ ತೆರೆಗೆ

‘ಪ್ರೀತಿ ಪ್ರೇಮ ಪಂಗನಾಮ’ ಸಿನಿಮಾ ಮೇ ಮೊದಲ ವಾರದಲ್ಲಿ ರಾಜ್ಯಾದ್ಯಂತ ತೆರೆಗೆ ಬರಲು ಚಿತ್ರತಂಡ ಯೋಜನೆ ರೂಪಿಸಿದೆ.

ಪ್ರಚಾರದ ಮೊದಲ ಹಂತವಾಗಿ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ಅದ್ಧೂರಿಯಾಗಿ ನಡೆಯಿತು.

ಕಥೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಶ್ರೀಕಂಠ.ಬಿ.ಎ ಹೇಳುವಂತೆ ,  ನಮ್ಮ ಮಕ್ಕಳು ಹಾಗಾಗಬಾರದು. ಅವರನ್ನು ಶ್ರೀಮಂತರನ್ನಾಗಿ ಮಾಡಲು ಹೋದಾಗ ಹೇಗೆ ಪಂಗನಾಮವಾಯಿತು ಅನ್ನುವುದನ್ನು ಹಾಸ್ಯದೊಂದಿಗೆ ಜತೆಗೆ ಒಂದಷ್ಟು ಉತ್ತಮ ಸಂದೇಶಗಳನ್ನು ಸಮಾಜಕ್ಕೆ ಹೇಳುವ ಪ್ರಯತ್ನ ಮಾಡಲಾಗಿದೆ. ಯುವ ಪ್ರತಿಭೆ ಶ್ರೀಕಾಂತ್‌ಕುಮಾರ್ ತುಮಕೂರು ಸಿನಿಮಾಕ್ಕೆ ಸಾಹಿತ್ಯ, ಸಹ ನಿರ್ದೇಶನ ಅಲ್ಲದೆ ಎಲ್ಲಾ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ.  ಚಿತ್ರವು ಯಶಸ್ವಿಯಾಗಲು  ಪ್ರೋತ್ಸಾಹಬೇಕೆಂದು ಕೋರಿದರು.

ಧೀರಜ್, ಉದಯ್ ನಾಯಕರು. ಡಯಾನ, ಚೈತ್ರಾ ನಾಯಕಿಯರು. ಇವರೊಂದಿಗೆ ಭದ್ರಾವತಿ ಶ್ರೀನಿವಾಸ್   ಅಭಿನಯಿಸಿದ್ದಾರೆ. ಸಂಗೀತ ಕುಮಾರ್‌ಈಶ್ವರ್, ಛಾಯಾಗ್ರಹಣ ಗುರುರಾಜ್, ಸಂಕಲನ ದೊಡ್ಡಮನೆ ಗಣೇಶ್ ಅವರದಾಗಿದೆ. ಹಾಸನ, ಚಿಕ್ಕಮಗಳೂರು, ಮಡಕೇರಿ, ಮೈಸೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.  ಮೇ ಮೊದಲ ವಾರದಲ್ಲಿ ರಾಜ್ಯಾದ್ಯಂತ ಅದರಲ್ಲೂ ಬಿ ಸೆಂಟರ್‌ನ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.

ಉದಯ ವಾಹಿನಿಯಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ’ಹಾಸ್ಯ ಲಾಸ್ಯ’ ಕಾಮಿಡಿ ಧಾರವಾಹಿ  ನೀಡಿ ವೀಕ್ಷಕರನ್ನು ರಂಜಿಸಿದ್ದ ಹೆಸರಾಂತ ಜೋಡಿ  ಡಾ.ಮುತ್ತುರಾಜ್ ಎಂ.ಎಸ್ ಮತ್ತು ಶ್ರೀಕಂಠ ಬಿ.ಎ., ‘ಪ್ರೀತಿ ಪ್ರೇಮ ಪಂಗನಾಮ’ ಚಿತ್ರ ಮಾಡುವುದರೊಂದಿಗೆ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!