ಹೊಸಬರ ‘ಪ್ರತ್ಯರ್ಥ’ ಚಿತ್ರ ಫೆಬ್ರುವರಿ 28 ರಂದು ರಾಜ್ಯದಾದ್ಯಂತ ಚಿತ್ರಮಂದಿಗಳಲ್ಲಿ ಬಿಡುಗಡೆಯಾಗಲಿದೆ.
ಕಾರ್ಕಳದ ಅರ್ಜುನ್ ಕಾಮತ್ ನಿರ್ದೇಶನದ ತನಿಖಾ ಥ್ರಿಲ್ಲರ್ ಚಿತ್ರದ ಟ್ರೇಲರ್ ನ್ನು ನಟ ಶ್ರೀಮುರಳಿ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಚಿತ್ರವು ಎರಡು ಛಾಯೆಯ ಕಥಾಹಂದರವನ್ನು ಹೊಂದಿದೆ. ಇದರಲ್ಲಿ ರಾಮ್ ಮತ್ತು ಅಕ್ಷಯ್ ಕಾರ್ಕಳ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಶ್ರುತಿ ಚಂದ್ರಶೇಖರ್ ನಾಯಕಿಯಾಗಿದ್ದಾರೆ. ಪೋಷಕ ಪಾತ್ರಗಳಲ್ಲಿ ಸುಮನ್ ತಲ್ವಾರ್, ನವೀನ್ ಡಿ ಪಡೀಲ್, ರಮೇಶ್ ಭಟ್ ಮತ್ತು ದೀಪಕ್ ರೈ ಇದ್ದಾರೆ.
ನಾಗೇಶ್ ಎಂ, ಜೈ ಆರ್ ಪ್ರಭು, ನಿತ್ಯಾನಂದ ಪೈ, ಪ್ರೇಮಕುಮಾರ್ ವಿ ಮತ್ತು ಭರತ್ ಶೆಟ್ಟಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಸುನಾದ್ ಗೌತಮ್ ಅವರ ಸಂಗೀತ ಸಂಯೋಜನೆ, ವಿನುತ್ ಅವರ ಛಾಯಾಗ್ರಹಣವಿದೆ.
‘ನನ್ನ ಸ್ನೇಹಿತ ರಾಮ್ ಮತ್ತು ನಾನು ಈ ಸ್ಕ್ರಿಪ್ಟ್ ಅನ್ನು ರೂಪಿಸಲು ಒಂದು ವರ್ಷ ಕಳೆದಿದ್ದೇವೆ. ಶೀರ್ಷಿಕೆ ಹಳೆಯದಾಗಿರಬಹುದು. ಆದರೆ ಇದು ನಮ್ಮ ಕಥೆಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ, ಸಮಕಾಲೀನವಾಗಿದೆ. ಇದು ತನಿಖಾ ಥ್ರಿಲ್ಲರ್ ಆಗಿದ್ದು, ಪ್ರತಿಯೊಂದಕ್ಕೂ ಅರ್ಥವಿದೆ’ ಎಂದು ನಿರ್ದೇಶಕ ಅರ್ಜುನ್ ಹೇಳಿದ್ದಾರೆ.
—-

Be the first to comment