ಸಿನಿಮಾವನ್ನೇ ಅಬಾಶನ್ ಮಾಡಿಸ್ತಾರೆ ಹುಷಾರ್!
ಸೆನ್ಸ್ ಕಳೆದುಕೊಂಡಿದೆಯಾ ಸೆನ್ಸಾರ್ ಮಂಡಳಿ?
ಸಿನಿಮಾ ರಿಲೀಸ್ ಆದ ಮೇಲೆ, ಚಿತ್ರದ ವಿಮರ್ಶೆ ಬರಿಯೋದು ಸರ್ವೇ ಸಮಾನ್ಯ. ಆದರೇ ಇನ್ನೂ ರಿಲೀಸ್ ಆಗದ ಚಿತ್ರದ ಬಗ್ಗೆ ವಿಮರ್ಶೆ ಬರೆಯುವ ಪರಿಪಾಠ ಆರಂಭವಾಗಿದೆ ಎಂದರೆ ನೀವು ನಂಬಲೇಬೇಕು. ಈ ಪರಿಪಾಠ ಆರಂಭಿರೋದು, ಎಲ್ಲಾ ಸಿನ್ಮಾಗಳನ್ನು ನೋಡಿ ಅದಕ್ಕೆ ವಿವಿಧ ಹಣೆಪಟ್ಟಿಯನ್ನು ನೀಡುವ ಸೆನ್ಸಾರ್ ಮಂಡಳಿಯ ಅಂಗಳದಿಂದ! ಹೌದು ಇಂತಹದೊಂದು, ಕೊರೋನವನ್ನೂ ಮೀರಿದ ಅಪಾಯಕಾರಿ ಬೆಳವಣಿಗೆ ಬಗ್ಗೆ ಇರುವ ಈ ಸ್ಟೋರಿ ನೀವು ಓದಲೇ ಬೇಕು. ಬಿಕಾಸ್ ಇದು ಇಡೀ ಕನ್ನಡ ಚಿತ್ರರಂಗವನ್ನೇ ಬುಡಮೇಲು ಮಾಡುವಂತಹ ಬೆಳವಣಿಗೆ.
ಈ ಹಿಂದೆಯೂ ಸೆನ್ಸಾರ್ ಮಂಡಳಿಯ ನಡೆಯ ಬಗ್ಗೆ ಸಾಕಷ್ಟು ಅಸಮಾನದ ಹೊಗ್ಗೆ ಎದ್ದು, ಧರಣಿ-ಹೋರಾಟಗಳು ನಡೆದರೂ ಇನ್ನೂ ಸೆನ್ಸಾರ್ನ ಆಯಕಟ್ಟಿನ ಸ್ಥಾನದಲ್ಲಿ ಕುಳಿತವರಿಗೇ ಇನ್ನೂ ತಾವು ‘ಚಿತ್ರರಂಗದ ಪಾಲಿನ ಸ್ವಯಂಘೋಷಿತ ದೇವಮಾನವರು’ ಅನ್ನುವ ಹೆಡ್ವೈಟ್ ಕಮ್ಮಿ ಆಗಿಲ್ಲ. ಪ್ರಚಾರದ ತೆವಲಿಗೋ, ತಾವು ಅತೀ ಬುದ್ಧಿವಂತರು ಎಂದು ಪ್ರೂವ್ ಮಾಡುವ ಭರದಲ್ಲಿ ಫೇಸ್ಬುಕ್ ಹೊಕ್ಕು ಗೀಚ ಬಾರದ್ದನ್ನು ಗೀಚುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ತಮ್ಮ ಗೀಚಿನಿಂದಾಗಿ ಸಾಕಷ್ಟು ಕುಟುಂಬಗಳು ಬೀದಿಗೆ ಬರುತ್ತವೆ ಅನ್ನುವ ಸೆನ್ಸ್ ಇವರಿಗಿಲ್ಲ.
ಪ್ರತಿಭಾ ನಂದಕುಮಾರ್. ಈ ಹೆಸರು ಕೇಳೇ ಇರುತ್ತೀರಿ. ಕನ್ನಡದ ಲೇಖಕಿಯರಲ್ಲಿ, ಕವಿಯತ್ರಿಯರಲ್ಲಿ ಎದ್ದು ಕಾಣುವ ಹೆಸರು. ಒಂದು ಕಡೆ ತಮ್ಮ ಕವನಗಳ ಮೂಲಕ ಕನ್ನಡಿಗರನ್ನು ಬೆಚ್ಚಿ ಬೀಳಿಸುತ್ತಲೇ ಇನ್ನೊಂದೆಡೆ ಅವರನ್ನು ಮೆಚ್ಚಿಸಿದ ಇವರು ಈಗ ಅಕ್ಷರಶಃ ಕನ್ನಡ ಸಿನಿಮಾ ಮೂಲಕ ಯಾರು ಜೀವನ ಕಟ್ಟಿಕೊಳ್ಳುತ್ತಿದ್ದಾರೋ ಅವರ ಬದುಕಿಗೇ ಕೊಳ್ಳಿ ಇಡಲು ಹೊರಟಿದ್ದಾರೆ. ಅಲ್ಲಲ್ಲಿ ತಮ್ಮ ತಮ್ಮ ವೈಯಕ್ತಿಕ ಕಷ್ಟನಷ್ಟದ ಬಗ್ಗೆ ಬರೆದುಕೊಳ್ಳುವ ಇವರಿಗೆ ಇನ್ನೊಬ್ಬರ ಕಷ್ಟ ಅರ್ಥವಾಗದ್ದು ಶೋಚನೀಯ.ಇಂತಿಪ್ಪ ಪ್ರತಿಭಾ, ಸೆನ್ಸಾರ್ ಮಂಡಳಿಯಲ್ಲಿ ಎಗ್ಸಾಮಿನಿಂಗ್ ಕಮಿಟಿಯ ಮೆಂಬರ್ ಕೂಡ ಆಗಿದ್ದಾರೆ. ಇಲ್ಲಿ ಚಿತ್ರಗಳನ್ನು ನೋಡಿ ಷರಾ ಬರೆಯುವುದು ಇವರ ಬಹುದೊಡ್ಡ ಜವಬ್ದಾರಿಯ ಕೆಲಸ. ಪ್ರತಿಭಾವಂತ ಪ್ರತಿಭಾ ಅವರಿಗೆ ಈ ಗೌರವ ಸಲ್ಲಬೇಕಾದದ್ದೇ ಇದರ ಬಗ್ಗೆ ಎರಡು ಮಾತಿಲ್ಲ. ಆದರೆ, ಸೆನ್ಸಾರ್ಗಾಗಿ ಏರ್ಪಡಿಸಿ ಶೋ ನೋಡಿಬಂದ ಇವರು ಸಂಜೆಯಾಗುತ್ತಿದ್ದಂತೆ ಚಿತ್ರದ ಬಗ್ಗೆ ಎಫ್.ಬಿಯಲ್ಲಿ ತಮ್ಮದೇ ರೀತಿಯಲ್ಲಿ ವಿಮರ್ಶೆ ಬರೆಯುತ್ತಾರೆ (ಫೋಟೋ ನೋಡಿ). ಬಹುಶಃ ಸೆನ್ಸಾರ್ ಮಂಡಳಿಯವರು ಇದಕ್ಕೇ ಇವರಿಗೆ ಪರ್ಮಿಶನ್ ನೀಡಿರಬೇಕು!. ಅಥವಾ ಸೆನ್ಸಾರ್ ಮಂಡಳಿಯನ್ನೂ ಮೀರಿ ಇವರು ಬೆಳೆದಿರಬೇಕು. ಇಲ್ಲ ಇದೆಲ್ಲಾ ಪೈಡ್ ಗೀಚುಗಳಾ? ನಾವು ಅಂದಕೊಳ್ಳಬಹುದು ಇದರಿಂದ ಸಿನಿಮಾ ನಂಬಿಕೊಂಡು ಬದುಕುವವರ ಬದುಕಿಗೆ ಏನಾಗುತ್ತದೆ ಎಂದು. ಸೆನ್ಸಾರ್ ಮಂಡಳಿ ಚಿತ್ರ ನೋಡಿ ರಿವ್ಯೂ ಬರೆಯಲು ಹೊರಟರೆ ದುಡ್ಡು ಹೂಡಿರುವ ನಿರ್ಮಾಪಕ ಗತಿ ಏನಾಗಬೇಕು. ಸೆನ್ಸಾರ್ ಮಂಡಳಿಯಲ್ಲಿ ಕೂತು ಈ ರೀತಿಯ ಕೆಲಸ ಮಾಡುವುದರಿಂದ, ಚಿತ್ರ ರಿಲೀಸ್ಗೂ ಮೊದಲೇ ಚಿತ್ರದ ಬಗ್ಗೆ ಬ್ಯಾಡ್ ಇಂಪ್ರೆಶನ್ ಮೂಡಿದರೆ… ಚಿತ್ರದ ಮುಂದಿನ ವ್ಯವಹಾರದ ಕತೆ ಏನಾಗಬೇಕು? ಅಂತಹ ಚಿತ್ರವನ್ನು ಯಾವ ಡಿಸ್ಟ್ರೂಬ್ಯೂಟರ್ ಮೂಸುತ್ತಾನೆ? ಇದೊಂದು ರೀತಿಯಲ್ಲಿ ಹೆಣ್ಣು ಮಗು ಎಂದು ತಿಳಿದು ಹುಟ್ಟುವ ಮೊದಲೇ ಅಬಾಶನ್ ಮಾಡಿದ ಹಾಗೆ! ತಮ್ಮ ಬರವಣಿಗೆಯ ಮೂಲಕ ತಾನುಸ್ತ್ರೀ ಸಂವೇದನೆಯ ದನಿ ಎಂದು ಗುರುತಿಸಿಕೊಂಡಿರುವ ಅವರಿಗೆ ಇದು ಯಾವ ಶೋಭೆಯನ್ನೂ ತರಲಾರದು.
‘ನಾನು ಯಾವ ಚಿತ್ರದ ಬಗ್ಗೆಯೂ ಕೆಟ್ಟದಾಗಿ ಬರೆದಿಲ್ಲ’ ಎಂಬರ್ಥದಲ್ಲಿ ಇವರು ಜಾರಿಕೊಳ್ಳಬಹದು.. ಆದರೆ ಚಿತ್ರ ನೋಡಿ ಪರೋಕ್ಷವಾಗಿ ಚಿತ್ರದ ಬಗ್ಗೆ ಬರೆದು ತಮ್ಮ ಕೀಳು ಮಟ್ಟದ ಮನಸ್ಥಿತಿಯನ್ನು ಇವರು ಈ ಹಿಂದೆ ಮಾಡಿದ್ದರು. ಆದರೆ, ಅವೆಲ್ಲವನ್ನೂ ಎಫ್.ಬಿಯಿಂದ ಡಿಲೀಟ್ ಮಾಡಲಾಗಿದೆ. ಈ ಹಿಂದೆ ಈ ದೇಶ ಕಂಡ ಅಪ್ರತಿಮ ಯೋಧ ಅಭಿನಂದನ್ ಪಾಕ್ ಕಪಿ ಮುಸ್ಠಿಯಲ್ಲಿ ಸಿಕ್ಕು ಒದ್ದಾಡುತ್ತಿರುವಾಗ..ಅಭಿನಂದನ್ ವಿರುದ್ಧವೇ ಗೀಚಿ ಮಾಧ್ಯಮಗಳಿಂದ ಡಿಸೈನ್..ಡಿಸೈನ್ ಆಗಿ ಹೊಗಳಿಸಿಕೊಂಡು ತಮ್ಮ ಪೇಸ್ಬುಕ್ ಅಕೌಂಟ್ ಅನ್ನೇ ಡಿಲೀಟ್ ಮಾಡಿದ್ದನ್ನು ನೀವಿಲ್ಲಿ ನೆನಪಿಸಿಕೊಳ್ಳಲೇಬೇಕು. ಸಿನಿಮಾ ರಿಲೀಸ್ ಮುನ್ನವೇ ಚಿತ್ರ ನೋಡಿ ತನಗೆ ಇಷ್ಟವಾದ ಚಿತ್ರ ಬಗ್ಗೆ ಹೊಗಳಿ ಬರಯುವುದು ಕೂಡ, ಕ್ರಿಯಾಶೀಲ ಕ್ಷೇತ್ರದಲ್ಲಿದ್ದುಕೊಂಡೇ ಇವರು ಮಾಡುವ ದೊಡ್ಡ ಅನ್ಯಾಯ. ಇವರು ಮಾಡುವ ಈ ಬೇಜಾವಾಬ್ದಾರಿ ಕೆಲಸದಿಂದ ಯರ್ರಾರಿಗೇ ಏನೇನು ತೊಂದರೆಗಳಾಗುತ್ತವೆ ಅನ್ನುವುದನ್ನು ಇವರಿಗೆ ತಿಳಿಸಿ ಹೇಳಬೇಕಾಗಿಲ್ಲ. ಎಲ್ಲಾ ಗೊತ್ತಿದ್ದೂ ತಪ್ಪು ಮಾಡುತ್ತಿರುವುದಕ್ಕೆ ಇವರನ್ನು ಏನೆಂದು ಕರೆಯೋಣ, ನೀವೇ ಹೇಳಿ? ಪ್ರತಿಭಾ ಅವರೇ, ನೀವು ಕನ್ನಡದ ಒಬ್ಬ ಅಪರೂಪದ ಕವಿಯಿತ್ರಿ ಎನ್ನುವದರಲ್ಲಿ ಎರಡು ಮಾತಿಲ್ಲ. ನಿಮ್ಮ ಹಾಗೆ ಕವನ ಕಟ್ಟವ, ಇದ್ದದ್ದನ್ನು ಇದ್ದಕ್ಕಿದ್ದಂತೆ ಸೀದಾ ಸೀದಾ ಹೇಳುವ ಮತ್ತೊಬ್ಬ ಕವಯಿತ್ರಿ ಕನ್ನಡದಲ್ಲಿಲ್ಲ. ನಿಮ್ಮಲ್ಲಿ ‘ಬಿಸಿನಿಮಾಸ್’ಯ ಕಳಕಳಿ ಇಷ್ಟೇ. ದಯವಿಟ್ಟು ಸಿನಿಮಾವನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳನ್ನು, ನಿಮ್ಮ ಅಧಿಕಾರದ ತೋರ್ಪಡಿಕೆಗೋ, ನಿಮಗಿರುವ ವಿಶೇಷ ಸ್ವಾತಂತ್ರ್ಯದ ಹೆಸರಿನಲ್ಲೋ ಬೀದಿಗೆ ತರಬೇಡಿ. ಯಾಕೆಂದರೆ, ನೀವು ಒಂದಷ್ಟು ಸಿನಿಮಾ ನೋಡೋ ಕೆಲಸದಿಂದ ಅನ್ನ ತಿನ್ನುತ್ತೀರಲ್ಲವೇ? ಯೋಚಿಸಿ.. ಪ್ಲೀಸ್
Be the first to comment