ಪ್ರತಿಭಾ ನಂದಕುಮಾರ್ ಎಫ್.ಬಿ ಪೋಸ್ಟ್ ಗಳು ಗಾಯಬ್!
ರಿಶಭ್ ಶೆಟ್ಟಿಗೂ ಅದೇ ನ್ಯಾಯ!
ಆತ್ಮೀಯ ಓದುಗರೆ, ನಿಮಗೊಂದು ಸಂತಸದ ಸಂಗತಿ ತಿಳಿಸೋ ಖುಷಿ ನಮ್ಮದು. ಕಾರಣ ಕನ್ನಡ ಚಿತ್ರರಂಗದ ಕಾಳಜಿಯಿಂದ ‘ಬಿಸಿನಿಮಾಸ್’ ಸೆನ್ಸಾರ್ ಮಂಡಳಿಯಲ್ಲಿ ಎಗ್ಸಾಮಿನಿಂಗ್ ಕಮಿಟಿಯ ಮೆಂಬರ್ ಆಗಿರೋ ಪ್ರತಿಭಾ ನಂದಕುಮಾರ್ ಅವರ ಬಗ್ಗೆ ವರದಿ ಮಾಡಿತ್ತು.
ಆ ವರದಿಯನ್ನು ನಿವೇಲ್ಲರೂ ಓದಿ ಅಲ್ಲಿಗೇ ನಿಲ್ಲಿಸದೆ, ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಮಾಡ್ಬಿಟ್ರಿ. ಈ ಮೂಲಕ ಕನ್ನಡ ಚಿತ್ರರಂಗದ ಬಗ್ಗೆ ನಿಮಗೆ ಇರುವ ಬದ್ಧತೆಯನ್ನು ತೋರಿಸಿದಿರಿ. ನಮ್ಮ ವರದಿ ಯಾರಿಗೆ ತಲುಪಬೇಕೋ ಅವರೊಗೆ ತಲುಪೇ ಬಿಟ್ಟಿತು. ಪರಿಣಾಮವಾಗಿ ಪ್ರತಿಭಾ ಮೇಡಂ ಸೆನ್ಸಾರ್ ನೋಡಿ ಬಂದು ಎಪ್.ಬಿಯಲ್ಲಿ ಗೀಚಿದ್ದ ಅಷ್ಟು ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದಾರೆ. ಈಗ ಅವರ ಪ್ರೋಫೈಲ್ ಹೊಕ್ಕು ನೋಡಿ ಇನ್ನೂ ರೀಲಿಸ್ ಆಗದ ಸಿನಿಮಾ ಬಗ್ಗೆ ಒಂದೇ ಒಂದು ಅಕ್ಷರ ಇಲ್ಲ! ಇದಕ್ಕೆ ಕಾರಣ ನೀವು ಕೊಟ್ಟ ಬೆಂಬಲ. ‘ಬಿಸಿನಿಮಾಸ್’ ಬರೀ ಕನ್ನಡ ಚಿತ್ರರಂಗದ ಸುದ್ದಿಯನ್ನಷ್ಟೇ ಹೇಳುವ ವೆಬ್ಸೈಟ್ ಅಲ್ಲ, ಅದೊಂದು ರೆಸ್ಪಾನ್ಸಿಬಲ್ ಜರ್ನಲಿಸಂನ ಭಾಗ ಅನ್ನುವುದನ್ನು ನೀವು ನಿರೂಪಿಸಿ ಬಿಟ್ರಿ. ನಿಮ್ಮ ಸಲಹೆ, ಸಹಕಾರ ಮತ್ತು ಪ್ರೋತ್ಸಾಹ ಸದಾ ಹೀಗೆ ಇರಬೇಕೆಂದು ಆಶಿಸುತ್ತೇವೆ.
ನಮ್ಮ ವರದಿಯನ್ನು ಸಾಕಷ್ಟು ಜನ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ರು. ಅದಕ್ಕೆ ಬಂದ ಎಲ್ಲಾ ಕಾಮೆಂಟುಗಳೂ ಹೇಗಿತ್ತೆಂದರೆ ಪ್ರತಿಭಾ ಮೇಡಂ ಪೋಸ್ಟ್ ಗಳನ ಡಿಲೀಟ್ ಮಾಡದೆ ಬೇರೆ ದಾರಿ ಇರಲಿಲ್ಲ. ಈ ಸೆನ್ಸಾರ್ ಮೇಡಂ, ರಿಶಭ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಅಭಿನಯದ ‘ಗರುಡ ಗಮನ ವೃಷಭ ವಾಹನ’ ಚಿತ್ರವನ್ನು ಸೆನ್ಸಾರ್ ಹೆಸರಿನಲ್ಲಿ ನೋಡಿ.. ‘ಇಲ್ಲಿವರೆಗೆ ಕನ್ನಡದಲ್ಲಿ ಇಂತಹ ಪ್ರಯತ್ನ ಕಂಡಿಲ್ಲ, ಇದು ‘ಕಾಮಟಿಪಡಂ’ ಚಿತ್ರದಷ್ಟೇ ಚೆನ್ನಾಗಿದೆ..’ ಎಂಬರ್ಥದಲ್ಲಿ ಗೀಚಿದ್ದರು. ಆ ಮೂಲಕ ‘ಗ.ಗ.ವೃ.ವಾ’ ತಂಡದ ಒಂದು ಅದ್ಭುತ ಪ್ರಯತ್ನವನ್ನು ಇನ್ಯಾವುದೋ ರಿಲೀಸ್ ಆಗಿರುವ ಚಿತ್ರಕ್ಕೆ ಹೋಲಿಸಿ ಪ್ರೇಕ್ಷಕನ ನಿರೀಕ್ಷೆಗೆ ಎಳ್ಳು ನೀರು ಬಿಟ್ಟಿದ್ದರು. ಈಗ ಆ ಪೋಸ್ಟ್ ಕೂಡ ಮಂಗಮಾಯ!
ಸಿನಿಮಾ ರಿಲೀಸ್ ಆದ ಮೇಲೆ, ಚಿತ್ರದ ವಿಮರ್ಶೆ ಬರಿಯೋದು ಸರ್ವೇ ಸಮಾನ್ಯ. ಆದರೇ ಇನ್ನೂ ರಿಲೀಸ್ ಆಗದ ಚಿತ್ರದ ಬಗ್ಗೆ ವಿಮರ್ಶೆ ಬರೆಯುವ ಪರಿಪಾಠವನ್ನು ಆರಂಭಿಸಿದ್ದ ಸೆನ್ಸಾರ್ ಮೇಡಂ ತಾವೇ ಅದಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಇವರ ಬಳಿ ‘ಬಿಸಿನಿಮಾಸ್’ ದಯವಿಟ್ಟು ಸಿನಿಮಾವನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳನ್ನು, ನಿಮ್ಮ ಅಧಿಕಾರದ ತೋರ್ಪಡಿಕೆಗೋ, ನಿಮಗಿರುವ ವಿಶೇಷ ಸ್ವಾತಂತ್ರದ ಹೆಸರಿನಲ್ಲೋ ಬೀದಿಗೆ ತರಬೇಡಿ.. ಎಂದು ರಿಕ್ವೆಸ್ಟ್ ಮಾಡಿಕೊಂಡಿತ್ತು. ನಮ್ಮ ಬಿನ್ನಹವನ್ನು ಅತ್ಯಂತ ಗೌರವಪೂರ್ವಕವಾಗಿ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು ಮೇಡಂ.

Be the first to comment