ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಅಭಿನಯದ ʻನಟ ಭಯಂಕರ’ ಸಿನಿಮಾ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಂಡಿದೆ.
ಈ ಬಾರಿ ಪ್ರಥಮ್ ನಟನೆಯ ಜೊತೆಗೆ ನಿರ್ದೇಶಕನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಪ್ರಥಮ್‌ಗೆ ನಾಯಕಿಯಾಗಿ ನಿಹಾರಿಕಾ ಮತ್ತು ಚಂದನಾ ಕಾಣಿಸಿಕೊಂಡಿದ್ದಾರೆ.
ಹಾರರ್ ಥ್ರಿಲರ್ ಮಿಶ್ರಿತ ಸಿನಿಮಾ ಇದಾಗಿದೆ. ಜೊತೆಗೆ ಮನರಂಜನೆ ಸಿನಿಮಾ ಕೂಡಾ ಆಗಿದೆ ಎಂದು ಪ್ರಥಮ್ ಹೇಳಿದ್ದಾರೆ.
ಪ್ರಥಮ್ ಜತೆ ಕುರಿ ಪ್ರತಾಪ್, ಓಂ ಪ್ರಕಾಶ್ ರಾವ್, ಮತ್ತು ಮಜಾ ಟಾಕೀಸ್ ಪವನ್, ಬಿರಾದಾರ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.
ಚಿತ್ರದಲ್ಲಿ ಪ್ರಥಮ್ ಸಿನಿಮಾ ಕಲಾವಿದನ ಪಾತ್ರ ನಿಭಾಯಿಸಿದ್ದಾರೆ . ಸಿನಿಮಾ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡಿದ್ದು, ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.
ಚಿತ್ರಕ್ಕೆ ಪ್ರೇಕ್ಷಕರು ಹೇಗೆ ಸ್ಪಂದನೆ ಮಾಡುತ್ತಾರೆ ಎನ್ನುವುದು ಇಂದೇ ತಿಳಿಯಲಿದೆ.
___

Be the first to comment