ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್ ನ ಕೆಜಿಎಫ್ 2 ಸಿನಿಮಾದ ಟೀಸರ್… ಜ.8ಕ್ಕೆ

ಸಿನಿಪ್ರಿಯರ ಬಹುನಿರೀಕ್ಷೆಯ ಚಿತ್ರ ಕೆಜಿಎಫ್-2. ಈಗಾಗಲೇ ಕೆಜಿಎಫ್- ಭಾಗ 1ಎಲ್ಲೆಡೆ ತನ್ನ ಹವಾ ಸೃಷ್ಟಿಸಿ ದಾಖಲೆಯನ್ನ ಮಾಡಿದೆ. ಇಂದಿಗೂ ಕೂಡ ಕೆಜಿಎಫ್ ನಂಬರ್ 1 ಸ್ಥಾನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಈಗ ಬಂದಿರೋ ವಿಶೇಷ ಮಾಹಿತಿ ಏನೆಂದರೆ  ಬಹುನಿರೀಕ್ಷಿತ ಚಿತ್ರ KGF – 2 ಟೀಸರ್ ಯಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಜನವರಿ ೮ ನೇ ತಾರೀಕು ೧೦ : ೧೮ ಸಮಯಕ್ಕೆ ಬಿಡುಗಡೆ ಮಾಡಲಾಗುವುದು. ಈ ಪ್ರಯುಕ್ತ ಇಂದು ಅನೌನ್ಸ್ಮೆಂಟ್ ಪೋಸ್ಟರ್ ಹೊರತರಲಾಗಿದೆ.

KGF- 2 ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿಯೇ ಮೂಡಿ ಬಂದಿದ್ದು, ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್ ಮುಂತಾದ ತಾರಾಗಣ ಹೊಂದಿದೆ. ಚಿತ್ರಕ್ಕೆ ಭುವನ್ ಗೌಡರವರ ಛಾಯಾಗ್ರಹಣ ವಿದ್ದು , ರವಿ ಬಸ್ರೂರು ಅವರೇ ಮತ್ತೊಮ್ಮೆ ಮನಸೂರೆ ಗೊಳ್ಳುವ ಸಂಗೀತ ಸಂಯೋಜಿಸಿದ್ದಾರೆ.

ಜನವರಿ ೮ ರಂದು ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನ್ನೆಲ್ನಲ್ಲಿ 10 :18 ಕ್ಕೆ ಚಿತ್ರದ ಟೀಸರ್ ರಿಲೀಸ್ ಮಾಡಲಾಗುತ್ತದೆ. ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ವಿಜಯ್ ಕಿರಗಂದೂರ್ ರವರ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!