ಜೂ. ಎನ್‌ಟಿಆರ್ ಅವರ 31ನೇ ಸಿನಿಮಾದಲ್ಲಿ ಕಮಲ್ ಹಾಸನ್ ನಟಿಸಲಿದ್ದಾರೆ.
ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ಕಮಲ್ ಹಾಸನ್‌ಗೆ ಪ್ರಶಾಂತ್ ನೀಲ್ ಕತೆ ಹೇಳಿದ್ದು, ಅವರು ಕತೆಯನ್ನು ಮೆಚ್ಚಿಕೊಂಡು ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಕಮಲ್ ಹಾಸನ್ ‘ವಿಕ್ರಂ’ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇದರ ಜೊತೆಗೆ ‘ಇಂಡಿಯನ್ 2’ ಸಿನಿಮಾದಲ್ಲಿಯೂ ಕಮಲ್ ನಟಿಸಿದ್ದಾರೆ. ಕಮಲ್ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಆ ಸಿನಿಮಾದಲ್ಲಿ ಶಿವಕಾರ್ತಿಕೇಯನ್ ನಾಯಕ ಹಾಗೂ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.
ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ನಿರ್ದೇಶನದಲ್ಲಿ ತೊಡಗಿರುವ ಪ್ರಶಾಂತ್ ನೀಲ್, ಜೂ ಎನ್‌ಟಿಆರ್, ರಾಮ್ ಚರಣ್ ತೇಜ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಪಟ್ಟಿಗೆ ಕಮಲ್ ಹಾಸನ್ ಸೇರ್ಪಡೆಯಾಗಿರುವುದು ಪ್ರಶಾಂತ್ ನೀಲ್ ಹೆಗ್ಗಳಿಕೆಗೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಪ್ರಶಾಂತ್ ನೀಲ್ ಅವರು ಜ್ಯೂ. ಎನ್ ಟಿ ಆರ್ ಅವರ ಜೊತೆ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಜೊತೆಗೆ ಫಸ್ಟ್ ಲುಕ್ ಶೇರ್ ಮಾಡಿದ್ದರು. ರಕ್ತದಲ್ಲಿ ತೋಯ್ದ ಮಣ್ಣು ಮಾತ್ರ ನೆನಪಾಗುವುದು. ಅವನ ಮಣ್ಣು, ಅವನ ಆಳ್ವಿಕೆ, ಆದರೆ ಅವನ ರಕ್ತವಲ್ಲ ಎಂದು ಕ್ಯಾಪ್ಷನ್ ನೀಡಿದ್ದರು.
____

Be the first to comment