ಜೂ.ಎನ್ ಟಿ ಆರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ

ಜೂ.ಎನ್ ಟಿ ಆರ್ ನಟನೆಯ 31ನೇ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಜೂ ಎನ್ ಟಿ ಆರ್ 31ನೇ ಸಿನಿಮಾ ತಯಾರಾಗಲಿದೆ. ಈ ಇಬ್ಬರು ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಕಳೆದ ಎರಡು ವರ್ಷಗಳಿಂದ ಸದ್ದು ಮಾಡುತ್ತಿತ್ತು. ಆದರೆ ಈ ಬಗ್ಗೆ ಪ್ರಶಾಂತ್ ನೀಲ್ ಅಥವಾ ಜೂ ಎನ್ ಟಿ ಆರ್ ಯಾವುದೇ ಮಾಹಿತಿ ಬಹಿರಂಗ ಪಡಿಸಿರಲಿಲ್ಲ. ಆದರೆ ಆರ್ ಆರ್ ಆರ್ ನಟನ ಹುಟ್ಟುಹಬ್ಬದ ದಿನ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಅಧಿಕೃತವಾಗಿ ಸಿನಿಮಾ ಮಾಡುವ ಸುದ್ದಿ ಹೊರಗೆ ಬಿದ್ದಿದೆ.

ನಿರ್ದೇಶಕ ಪ್ರಶಾಂತ್ ನೀಲ್ ಫಸ್ಟ್ ಲುಕ್ ಶೇರ್ ಮಾಡಿದ್ದಾರೆ. ರಕ್ತದಲ್ಲಿ ತೋಯ್ದ ಮಣ್ಣು ಮಾತ್ರ ನೆನಪಾಗುವುದು. ಅವನ ಮಣ್ಣು, ಅವನ ಆಳ್ವಿಕೆ, ಆದರೆ ಅವನ ರಕ್ತವಲ್ಲ ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದು ಪಕ್ಕಾ ಮಾಸ್ ಸಿನಿಮಾ ಎನ್ನುವುದು ಅರಿವಿಗೆ ಬರುತ್ತಿದೆ. ಪೋಸ್ಟರ್ ಗೆ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದು, ಅನೇಕರು ಇದು ಬ್ಲಾಕ್ ಬಸ್ಟರ್ ಎಂದು ಹೇಳಿದ್ದಾರೆ.

ಜೂ.ಎನ್ ಟಿ ಸದ್ಯ ಆರ್ ಆರ್ ಆರ್ ಆರ್ ಸಿನಿಮಾದ ಸಕ್ಸಸ್ ನಲ್ಲಿದ್ದಾರೆ. ಪ್ರಶಾಂತ್ ನೀಲ್ ಕೆಜಿಎಫ್-2 ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಈ ಎರಡು ಸಿನಿಮಾಗಳು ಬಾಕ್ಸ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿವೆ.
ಜೂ.ಎನ್ ಟಿ ಆರ್ ಈಗ ನಿರ್ದೇಶಕ ಕೊರಟಾಲ ಶಿವ ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಇದು ಜೂ ಎನ್ ಟಿ ಆರ್ ಅವರ 30ನೇ ಸಿನಿಮಾ. ಬಳಿಕ ಅವರು ಪ್ರಶಾಂತ್ ನೀಲ್ ಜೊತೆ ಸಿನಿಮಾ ಆರಂಭಿಸಲಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!