“ಪ್ರಾರಂಭ”ದ 4ನೇ ಲಿರಿಕಲ್ ವಿಡಿಯೋ ಬಿಡುಗಡೆ

ಯಾವುದೇ ಸಿನಿಮಾ ಗಮನ ಸೆಳೆಯಬೇಕಾದರೆ ಮೊದಲು ಆ ಚಿತ್ರದ ಹಾಡುಗಳು ಚೆನ್ನಾಗಿರಬೇಕು. ಪದೇ ಪದೇ ಆ ಹಾಡು ಗುನುಗುವಂತೆ ಇರಬೇಕು, ಆಗ ಸಿನಿಮಾ ಗೆಲುವಿಗೆ ದಾರಿ ಸಿಕ್ಕಂತಾಗುತ್ತದೆ. ಇಂತಹ ಹಾದಿಯಲ್ಲಿ ಸಾಗುತ್ತಿರುವ ಚಿತ್ರವೇ ಪ್ರಾರಂಭ.

ಕ್ರೇಜಿ ಸ್ಟಾರ್ ರವಿಚಂದ್ರನ್ ಸುಪುತ್ರ ಮನುರಂಜನ್ ಎರಡು ವಿಭಿನ್ನ ಶೇಡ್ ಗಳಲ್ಲಿ ಅಭಿನಯಿಸಿರುವ ಪ್ರಾರಂಭ ಚಿತ್ರದ ಸೈಯಾನ್ ಸೈಯಾನ್ ಎಂಬ 4ನೇ ಲಿರಿಕಲ್ ವಿಡಿಯೋ ಹಾಡನ್ನು ಯುವ ಗಾಯಕ ಸಂಚಿತ್ ಹೆಗ್ಡೆ ಹಾಡಿದ್ದು, ಈ ಹಾಡು ಯೂಟ್ಯೂಬ್ ಚಾನಲ್ ನಲ್ಲಿ ಭಾರಿ ಸದ್ದನ್ನೇ ಮಾಡುತ್ತಿದೆ.

ಈಗಾಗಲೇ ಈ ಹಿಂದೆ ಪ್ರಾರಂಭ ಚಿತ್ರದ 3 ಲಿರಿಕಲ್ ವಿಡಿಯೋ ಹಾಡುಗಳು ಬಿಡುಗಡೆಯಾಗಿವೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಈಗ 4ನೇ ಲಿರಿಕಲ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಪ್ರಾರಂಭ ಚಿತ್ರ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದಿದ್ದು, ತೆರೆಗೆ ಬರುವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.

ಚಿತ್ರಕ್ಕೆ ಮನು ಕಲ್ಯಾಡಿ ಅವರ ರಚನೆ ಮತ್ತು ನಿರ್ದೇಶನವಿದ್ದು, ಜಗದೀಶ್ ಕಲ್ಯಾಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜೇನುಶ್ರೀ ತನುಷ ಪ್ರೊಡಕ್ಷನ್ ಮೂಲಕ ನಿರ್ಮಾಣ ವಾಗಿರುವ ಈ ಚಿತ್ರಕ್ಕೆ ರವಿ ವಡೇರಾಹಳ್ಳಿ ಅವರು ಸಹ ನಿರ್ಮಾಪಕರಾಗಿದ್ದಾರೆ.

ಕೇಜ್ರಿ ಪುತ್ರ ಮನುರಂಜನ್ ಪ್ರಾರಂಭ ಎಂಬ ಚಿತ್ರದಲ್ಲಿ ಮಾಸ್ ಹಾಗೂ ಕ್ಲಾಸ್ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದು , ಪ್ರಾರಂಭ ಒಂದು ವಿಭಿನ್ನ ಕಥಾಹಂದರವಿರುವ ಚಿತ್ರವಾಗಿ ಈ ಸಮಾಜಕ್ಕೆ ಪ್ರತ್ಯೇಕವಾಗಿ ಯುವಕ -ಯುವತಿಯರಿಗೆ ಒಂದು ಒಳ್ಳೆಯ ಸಂದೇಶ ಸಾರುವ ಸಿನಿಮಾ ಎಂಬ ಮಾತು ಕೇಳಿಬರುತ್ತಿದೆ.

5 ಹಾಡುಗಳಿರುವ ಈ ಚಿತ್ರಕ್ಕೆ ಪ್ರಜ್ವಲ್ ಪೈ ಅವರ ಸಂಗೀತ ನಿರ್ದೇಶನವಿದೆ. 2 ಸಾಹಸ ಸನ್ನಿವೇಶಗಳಿದ್ದು , ಥ್ರಿಲ್ಲರ್ ಮಂಜು ಹಾಗೂ ವಿಕ್ರಂ ಮೋರ್ ಸಾಹಸ ನಿರ್ದೇಶನ ಮಾಡಿದ್ದಾರೆ. ಸುರೇಶ್‍ಬಾಬು ಛಾಯಾಗ್ರಹಣ, ವಿಜಯ್.ಎನ್.ಕುಮಾರ್ ಸಂಕಲನ, ಸಂತು, ಗೀತಾ ನೃತ್ಯ ನಿರ್ದೇಶನ ಹಾಗೂ ರವಿ ಸಂತೆಹೈಕ್ಲು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸಂತೋಷ್ ನಾಯಕ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.

ಈ ಚಿತ್ರದಲ್ಲಿ ಮನುರಂಜನ್ ಅವರಿಗೆ ನಾಯಕಿಯಾಗಿ ಕೀರ್ತಿ ಕಲಕೇರಿ ಅಭಿನಯಿಸಿದ್ದಾರೆ. ಉಳಿದಂತೆ ಕಡ್ಡಿಪುಡ್ಡಿ ಚಂದ್ರು, ಹನುಮಂತೇಗೌಡ ರಾಘು ಶ್ರೀವಾಸತಿವ್, ಶಾಂಭವಿ, ಸೂರಜ್ ಮುಂತಾದವರ ತಾರಾಬಳಗವಿದೆ. ಈ ಪ್ರಾರಂಭ ಚಿತ್ರ ಉತ್ತಮವಾಗಿ ಮೂಡಿ ಬಂದಿದ್ದು , ಲಾಡ್ ಡೌನ್ ತೆರವುಗೊಂಡ ನಂತರ ಅದ್ಧೂರಿ ಪ್ರಚಾರದ ಮೂಲಕ ಬೆಳ್ಳಿ ಪರದೆ ಮೇಲೆ ಪ್ರಾರಂಭ ಆರಂಭಗೊಳ್ಳಲಿದೆ.

This Article Has 3 Comments
  1. Pingback: Digital Transformation

  2. Pingback: judi online

  3. Pingback: sextillion cologne for men by marlon samuels

Leave a Reply

Your email address will not be published. Required fields are marked *

Translate »
error: Content is protected !!