ಪೊರ್ಕಿ ಸಿನಿಮಾದಲ್ಲಿ ದರ್ಶನ್ ತೂಗುದೀಪಗೆ ನಾಯಕಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬ್ಯೂಟಿ ಪ್ರಣಿತಾ ಸುಭಾಷ್ (Pranitha Subhash),ನಂತರ ತೆಲುಗು, ತಮಿಳು, ಹಿಂದಿ, ಮಲಾಯಲಂ ಸಿನಿಮಾಗಳಲ್ಲೂ ನಟಿಗೂ ಅಲ್ಲೂ ಕೂಡ ಜನಪ್ರಿಯತೆ ಗಳಿಸಿದರು.
ಕನ್ನಡಲ್ಲಿ ದರ್ಶನ್, ಗಣೇಶ್, ದುನಿಯಾ ವಿಜಯ್, ಧ್ರುವ ಸರ್ಜಾ, ಉಪೇಂದ್ರರಂತಹ ದಿಗ್ಗಜರೊಂದಿಗೆ ನಟಿಸಿರುವ ಪ್ರಣೀತಾ, ತೆಲುಗಿನಲ್ಲಿ ಸಿದ್ಧಾರ್ಥ್, ಮಹೇಶ್ ಬಾಬು, ಎನ್ಟಿಆರ್, ಪವನ್ ಕಲ್ಯಾಣ್, ರಾಮ್ ಜೊತೆಯೂ ನಟಿಸಿದ್ದಾರೆ. ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಸ್ಯಾಂಡಲ್ವುಡ್ ನಟಿ ಪ್ರಣಿತಾ ಸುಭಾಷ್ (Pranitha Subhash) ಪ್ಯಾರಿಸ್ (Paris) ಬೀದಿಯಲ್ಲಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಎರಡು ಮಕ್ಕಳ ತಾಯಿಯಾಗಿರೋ ನಟಿಯ ಬೋಲ್ಡ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಗಮನ ಸೆಳೆಯೋ ಪ್ರಣಿತಾ ಇದೀಗ ಪ್ಯಾರಿಸ್ನಲ್ಲಿ ಶೋಲ್ಡರ್ಲೆಸ್ ಡ್ರೆಸ್ನಲ್ಲಿ ಮಿಂಚಿದ್ದಾರೆ. ಲೈಟ್ ಅರೇಂಜ್ ಧಿರಿಸಿನಲ್ಲಿ ಕಂಗೊಳಿಸಿದ್ದಾರೆ. ನಟಿಯ ಮುಖದಲ್ಲಿ ಗ್ಲೋ ಎದ್ದು ಕಾಣುತ್ತಿದೆ. ಮತ್ತೊಂದು ಪೋಸ್ಟ್ನಲ್ಲಿ ಒಳಉಡುಪು ಧರಿಸಿ, ಅದರ ಮೇಲೆ ಕೋಟ್ ಹಾಗೂ ಪ್ಯಾಂಟ್ ಧರಿಸಿದ್ದಾರೆ. ವಿವಿಧ ಭಂಗಿಯಲ್ಲಿ ಪ್ರಣಿತಾ ಪೋಸ್ ನೀಡಿದ್ದಾರೆ. ನಟಿಯ ಬೋಲ್ಡ್ ಅವತಾರಕ್ಕೆ ಬಗೆ ಬಗೆಯ ಕಾಮೆಂಟ್ಗಳು ಹರಿದು ಬರುತ್ತಿವೆ.
ಪ್ರಣಿತಾ ಸುಭಾಷ್ ತಾಯಿಯಾದ್ಮೇಲೆ ನಿಮ್ಮ ಅಂದ ಹೆಚ್ಚಾಯ್ತಾ? ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ನಟಿಯ ಫ್ಯಾಷನ್ ಸೆನ್ಸ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸಂತೂರ್ ಮಮ್ಮಿ ಎಂದು ಹಾಡಿ ಹೊಗಳಿದ್ದಾರೆ. ಅಂದಹಾಗೆ, ಉದ್ಯಮಿ ನಿತಿನ್ ಜೊತೆ 2021ರಲ್ಲಿ ಹಸೆಮಣೆ ಏರಿದರು. ಅವರ ಸುಂದರ ದ್ಯಾಂಪತ್ಯಕ್ಕೆ ಇಬ್ಬರೂ ಮಕ್ಕಳು ಸಾಕ್ಷಿಯಾಗಿದ್ದಾರೆ. ಮದುವೆಯಾದ್ಮೇಲೆಯೂ ಸಿನಿಮಾಗಳಲ್ಲಿ ಪ್ರಣಿತಾ ಆ್ಯಕ್ಟೀವ್ ಆಗಿದ್ದಾರೆ. ಕಳೆದ ವರ್ಷದ ಅಂತ್ಯದಲ್ಲಿ ಮಲಯಾಳಂ ಸಿನಿಮಾದಲ್ಲಿ ನಟಿ ಅಭಿನಯಿಸಿದ್ದರು. ದಿಲೀಪ್ಗೆ ನಾಯಕಿಯಾಗಿ ನಟಿಸಿದರು.

Be the first to comment