ಪ್ರಣಿತಾ ಸುಭಾಷ್

ಮಗನ ಫೋಟೊ ರಿವೀಲ್ ಮಾಡಿದ ಪ್ರಣಿತಾ ಸುಭಾಷ್

ಕನ್ನಡದ ನಟಿ ಪ್ರಣಿತಾ ಸುಭಾಷ್ ತಮ್ಮ ಮಗಳ ಜೊತೆಗೆ ಮಗನ ಫೋಟೊವನ್ನು ಸಹ ರಿವೀಲ್ ಮಾಡಿದ್ದು, ಆದರೆ ಅಭಿಮಾನಿಗಳು ಮಾತ್ರ ನಟಿಯ ಅಂದವನ್ನು ಹೊಗಳೋದರಲ್ಲಿ ಬ್ಯುಸಿಯಾಗಿದ್ದಾರೆ.

ಪೊರ್ಕಿ ಸಿನಿಮಾದಲ್ಲಿ ದರ್ಶನ್ ತೂಗುದೀಪಗೆ ನಾಯಕಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬ್ಯೂಟಿ ಪ್ರಣಿತಾ ಸುಭಾಷ್ (Pranitha Subhash), ನಂತರ ತೆಲುಗು, ತಮಿಳು, ಹಿಂದಿ, ಮಲಾಯಲಂ ಸಿನಿಮಾಗಳಲ್ಲೂ ನಟಿಗೂ ಅಲ್ಲೂ ಕೂಡ ಜನಪ್ರಿಯತೆ ಗಳಿಸಿದರು.

ಪ್ರಣಿತಾ ಸುಭಾಷ್

ಕನ್ನಡಲ್ಲಿ ದರ್ಶನ್, ಗಣೇಶ್, ದುನಿಯಾ ವಿಜಯ್, ಧ್ರುವ ಸರ್ಜಾ, ಉಪೇಂದ್ರರಂತಹ ದಿಗ್ಗಜರೊಂದಿಗೆ ನಟಿಸಿರುವ ಪ್ರಣೀತಾ, ತೆಲುಗಿನಲ್ಲಿ ಸಿದ್ಧಾರ್ಥ್, ಮಹೇಶ್ ಬಾಬು, ಎನ್ಟಿಆರ್, ಪವನ್ ಕಲ್ಯಾಣ್, ರಾಮ್ ಜೊತೆಯೂ ನಟಿಸಿದ್ದಾರೆ.

ಪ್ರಣೀತಾ 2021 ರಲ್ಲಿ ವೆಗಾ ಸಿಟಿ ಮಾಲ್ ಮಾಲಿಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯಾದ ನಿತಿನ್ ರಾಜು (Nithin Raju) ಅವರನ್ನು ವಿವಾಹವಾದರು. ವಿವಾಹದ ಬಳಿಕ ಸಿನಿಮಾದಲ್ಲಿ ಪ್ರಣಿತಾ ಕಾಣಿಸಿಕೊಂಡಿದ್ದು ಕಡಿಮೆಯೇ. ಈ ವರ್ಷ ಪ್ರಣಿತಾ ನಟನೆಯ ಮಲಯಾಳಂ ಸಿನಿಮಾ ತಂಗಮಣಿ ಸಿನಿಮಾ ಹಾಗೂ ಕನ್ನಡದಲ್ಲಿ ರಾಮನ ಅವತಾರ ಸಿನಿಮಾ ಬಿಡುಗಡೆಯಾಗಿತ್ತು.

ಪ್ರಣಿತಾ ಸುಭಾಷ್

ಪ್ರಣಿತಾ ಸುಭಾಷ್ 2022 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅವರು 2024 ರಲ್ಲಿ ಮತ್ತೊಂದು ಮಗುವಿಗೆ ಜನ್ಮ ನೀಡಿದರು. ಜುಲೈನಲ್ಲಿ ಎರಡನೇ ಪ್ರೆಗ್ನೆನ್ಸಿ ಬಗ್ಗೆ ಘೋಷಿಸಿದ ಪ್ರಣೀತಾ, ಸೆಪ್ಟೆಂಬರ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಇತ್ತೀಚೆಗೆ ತಮ್ಮ ಎರಡನೇ ಮಗುವಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಸೆಲೆಬ್ರೇಷನ್ ಮಾಡುತ್ತಾ, ನಟಿ ಪ್ರಣೀತಾ ಸುಭಾಷ್ ಮತ್ತು ಅವರ ಪತಿ ನಿತಿನ್ ರಾಜು ತಮ್ಮ ಎರಡನೇ ಮಗುವಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳಿಗೂ ಮಗುವಿನ ಪರಿಚಯ ಮಾಡಿಕೊಟ್ಟಿದ್ದಾರೆ.

ಪ್ರಣಿತಾ ತಮ್ಮ ಮಗಳಿಗೆ ಅರ್ನಾ ಎಂದು ಹೆಸರಿಟ್ಟಿದ್ದು, ಮಗನಿಗೆ ಇನ್ನೂ ಹೆಸರಿಟ್ಟಿಲ್ಲ. ತಮ್ಮನ ಆಗಮನದಿಂದ ಮಗಳು ಖುಷಿಯಾಗಿದ್ದಾಳೆ ಎಂದಿದ್ದಾರೆ. ಪ್ರಣಿತಾ ಕ್ರಿಸ್ಮಸ್ (Christmas) ಹಬ್ಬದಂದು ತನ್ನ ಮಕ್ಕಳ ಫೋಟೊ ಶೇರ್ ಮಾಡಿ ಸಂಭ್ರಮಿಸಿದರೆ, ಅಭಿಮಾನಿಗಳು ಮಾತ್ರ ಎರಡು ಮಕ್ಕಳಾದರೂ ಅದೇ ಚಾರ್ಮ್ ಉಳಿಸಿಕೊಂಡಿರುವ ಪ್ರಣಿತಾ ಅಂದವನ್ನು ಹೊಗಳುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!