ಬಿಜೆಪಿ ಬೆಂಬಲಿಸುತ್ತೇನೆ ಎನ್ನುವ ಕಿಚ್ಚ ಸುದೀಪ್ ಹೇಳಿಕೆ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಬೇಸರಗೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಪ್ರಕಾಶ್ ರಾಜ್, “ಕಿಚ್ಚ ಸುದೀಪ್ ಅವರ ಹೇಳಿಕೆಯಿಂದ ನನಗೆ ಆಘಾತವಾಗಿದೆ, ನೋವಾಗಿದೆ, ಕರ್ನಾಟಕದಲ್ಲಿ ಹತಾಶರಾಗಿರುವ, ಸೋತಿರುವ ಬಿಜೆಪಿಯಿಂದ ಹರಡಿದ ಸುಳ್ಳು ಸುದ್ದಿ ಇದು ಎಂದು ನಾನು ಬಲವಾಗಿ ನಂಬುತ್ತೇನೆ ” ಎಂದಿದ್ದಾರೆ.
ಕಿಚ್ಚ ಸುದೀಪ್ ಅವರು ಪ್ರಕಾಶ್ ರಾಜ್ ಟ್ವೀಟ್ ವಿಚಾರಕ್ಕೆ ಸಂಬಂಧಪಟ್ಟಂತೆ, ಪ್ರಕಾಶ್ ರಾಜ್ ಮತ್ತು ನಾನು ರನ್ನ ಸಿನಿಮಾ ಮಾದಿದ್ದೇವೆ. ಅವರ ಜೊತೆ ಮುಂದೆ ಯಾವ ಸಿನಿಮಾ ಮಾಡಬೇಕು ಅಂತ ಕಾಯ್ತಿದ್ದೇನೆ ಎಂದು ಸಿನಿಮಾ ಶೈಲಿಯಲ್ಲೇ ಉತ್ತರಿಸಿದ್ದಾರೆ.
ಬೇರೆ ಪಕ್ಷದಲ್ಲಿ ನನಗೆ ವಯಕ್ತಿಕವಾಗಿ ಸಹಾಯ ಮಾಡಿದವರ ಪರ ನಿಲ್ತೀನಿ. ನನ್ನ ಲೈಫಲ್ಲಿ ಯಾರೆಲ್ಲಾ ಇದ್ರು, ಸಹಾಯ ಮಾಡಿದ್ರು ಅಂತ ನನಗೆ ಮಾತ್ರ ಗೊತ್ತು. ಪಕ್ಷ ಅಂತ ಬರಲ್ಲ, ವ್ಯಕ್ತಿಗೆ ಮಾತ್ರ ಬಂದೆ. ಅಂಬಿ ಮಾಮ ಇದ್ದಾಗ ಅವರ ಪರ ನಿಂತೆ ಎನ್ನುದನ್ನು ಕಿಚ್ಚ ಸುದೀಪ್ ನೆನಪು ಮಾಡಿಕೊಂಡಿದ್ದಾರೆ.
ಸುದೀಪ್ ಅವರು ಬುಧವಾರ ಬಿಜೆಪಿಗೆ ತಮ್ಮ ಬೆಂಬಲವನ್ನು ಘೋಷಿಸಿದರು. ಪಕ್ಷದ ಪರವಾಗಿ ಪ್ರಚಾರ ಮಾಡುತ್ತೇನೆ. ಆದರೆ ಮೇ 10 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇದೇ ವೇಳೆ ಸುದೀಪ್ ಅವರ ಸಿನಿಮಾ ಟಿವಿ ಶೋ ಪ್ರಸಾರ ಮಾಡದಂತೆ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆಯುವುದಾಗಿ ಕೆಲ ಮುಖಂಡರು ಹೇಳಿರುವ ವರದಿಗಳು ಬಂದಿವೆ.
—
Be the first to comment