ಸಿನಿಮಾ: ಅಬ್ಬರ
ನಿರ್ದೇಶನ: ಕೆ. ರಾಮ್ ನಾರಾಯಣ್
ತಾರಾಗಣ: ಪ್ರಜ್ವಲ್ ದೇವರಾಜ್, ನಿಮಿಕಾ ರತ್ನಾಕರ್, ರವಿಶಂಕರ್, ಕೋಟೆ ಪ್ರಭಾಕರ್,ಶೋಭರಾಜ್ ಇತರರು.
ರೇಟಿಂಗ್: 3/5
‘ಒಳ್ಳೆಯವರಿಗೆ ಒಳ್ಳೆಯದಾಗಬೇಕು, ಕೆಟ್ಟವರಿಗೆ ಕೆಟ್ಟದಾಗಲೇಬೇಕು’ ಎನ್ನುವುದು ಪ್ರಜ್ವಲ್ ದೇವರಾಜ್ ಅಭಿನಯದ ‘ಅಬ್ಬರ’ ಸಿನಿಮಾದ ಥೀಮ್. ಇದು 25 ವರ್ಷಗಳಿಂದ ಸ್ಕೆಚ್ ಹಾಕಿ ಖಳನನ್ನು ಸದೆಬಡೆಯಲು ಕಾಯುತ್ತಿರುವ ಯುವಕನ ಕಥೆ ಹೊಂದಿದೆ. ಪ್ರಜ್ವಲ್ ದೇವರಾಜ್ ಹಲವು ಶೇಡ್‌ಗಳಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
‘ಅಬ್ಬರ’ ಸಿನಿಮಾದಲ್ಲಿ ಪ್ರಜ್ವಲ್ ಅವರನ್ನು ಎಷ್ಟು ಮಾಸ್ ಆಗಿ ತೋರಿಸಲು ಸಾಧ್ಯವೋ ಅಷ್ಟು ಮಾಸ್ ಆಗಿ ರಾಮ್ ನಾರಾಯಣ್ ತೋರಿಸಿದ್ದಾರೆ. ಇಲ್ಲಿ ಭರ್ಜರಿ ಫೈಟ್‌ಗಳಿವೆ. ಮಾಸ್ ಆಗಿ ಪ್ರಜ್ವಲ್ ಡೈಲಾಗ್ ಹೊಡೆಯುತ್ತಾರೆ. ಶಿವ, ಶಂಕರ್, ಪ್ರಸಾದ್ ಹೀಗೆ ನಾನಾ ಅವತಾರಗಳಲ್ಲಿ ಎಂಟ್ರಿ ಕೊಡುವ ಹೀರೋಗೆ ವೈರಮುಡಿ (ರವಿಶಂಕರ್) ಕೊನೆಗಾಣಿಸುವುದೇ ಗುರಿ. ಪ್ರಭಾವಿ ಆಗಿರುವ ವೈರಮುಡಿಯನ್ನು ಮಣ್ಣುಮುಕ್ಕಿಸಲು ಹೀರೋ ಏನೆಲ್ಲ ಚಾಲಾಕಿ ಆಟಗಳನ್ನು ಆಡುತ್ತಾನೆ ಅನ್ನೋದೇ ‘ಅಬ್ಬರ’ದ ಕಥೆ.
ವಿವಿಧ ಶೇಡ್‌ಗಳ ಪಾತ್ರವನ್ನು ಪ್ರಜ್ವಲ್ ಸಲೀಸಾಗಿ ನಿರ್ವಹಿಸಿದ್ದಾರೆ. ಫೈಟ್, ಡ್ಯಾನ್ಸ್ ವಿಚಾರದಲ್ಲಿ ಪ್ರಜ್ವಲ್ ಪರ್ಫೆಕ್ಟ್. ಮಾಸ್ ಡೈಲಾಗ್ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮೂವರು ನಾಯಕಿಯರು ತಮ್ಮ ಪಾತ್ರಗಳಿಗೆ ನ್ಯಾಯ ನೀಡಿದ್ದಾರೆ.
ಖಳನಾಗಿ ರವಿಶಂಕರ್ ಅಬ್ಬರಿಸಿದ್ದಾರೆ. ವಿಲನ್ ಜೊತೆಗೆ ಎಮೋಷನಲ್ ಆಗಿಯೂ ಅವರು ಕಾಣಿಸಿಕೊಂಡಿದ್ದಾರೆ. ಕೋಟೆ ಪ್ರಭಾಕರ್, ಅರಸು ಮಹಾರಾಜ್ ಕಾಮಿಡಿ ಖಳರಾಗಿ ಮಿಂಚಿದ್ದಾರೆ. ಶೋಭರಾಜ್, ಶಂಕರ್ ಅಶ್ವತ್ಥ್, ವಿಕ್ಟರಿ ವಾಸು, ಸಲ್ಮಾನ್ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಚಿತ್ರದ ಛಾಯಾಗ್ರಹಣ ಅಚ್ಚುಕಟ್ಟಾಗಿದೆ. ಸಾಕಷ್ಟು ಪಂಚಿಂಗ್ ಡೈಲಾಗ್‌ಗಳನ್ನು ಚಿತ್ರದಲ್ಲಿ ಕಾಣಬಹುದು. ರವಿ ಬಸ್ರೂರು ಸಂಗೀತ ಓಕೆ ಅನಿಸುತ್ತದೆ.
______
Be the first to comment