ನಟ, ನಿರ್ದೇಶಕ ಪ್ರದೀಪ್ ರಂಗನಾಥನ್ ಸತತ ಮೂರು ಚಿತ್ರಗಳು 100 ಕೋಟಿಗೂ ಹೆಚ್ಚು ಗಳಿಕೆ ಕಂಡ ಮೊದಲ ಭಾರತೀಯ ನಟ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
‘ಲವ್ ಟುಡೇ’, ‘ಡ್ರ್ಯಾಗನ್’ ಮತ್ತು ‘ಡ್ಯೂಡ್’ ಚಿತ್ರಗಳ ಮೂಲಕ ಅಸಾಧಾರಣ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಪ್ರದೀಪ್ ರಂಗನಾಥನ್ ಅವರನ್ನು ‘ಹ್ಯಾಟ್ರಿಕ್’ ಸಾಧನೆಯು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಭಾವಶಾಲಿ ಹೊಸ ಪೀಳಿಗೆಯ ನಟರ ಸಾಲಿನಲ್ಲಿ ನಿಲ್ಲಿಸಿದೆ.
ಕೀರ್ತಿಸ್ವರನ್ ನಿರ್ದೇಶನ ಮತ್ತು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಚಿತ್ರ ‘ಡ್ಯೂಡ್’ ಬಿಡುಗಡೆಯಾದ ಮೊದಲ ವಾರದಲ್ಲಿಯೇ ಜಾಗತಿಕವಾಗಿ 100 ಕೋಟಿ ಗಡಿ ದಾಟಿದೆ. ದೀಪಾವಳಿ ಹಬ್ಬದ ವಾರಾಂತ್ಯದಲ್ಲಿ ಬಿಡುಗಡೆಯಾದ ‘ಡ್ಯೂಡ್’ ತಮಿಳುನಾಡಿನಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ.
ಪ್ರದೀಪ್ ರಂಗನಾಥನ್ ಅವರು ‘ವೇಲ್ಸ್ ಫಿಲ್ಮ್ ಇಂಟರ್ನ್ಯಾಷನಲ್’ ಅಡಿಯಲ್ಲಿ ರವಿ ಮೋಹನ್ ಮತ್ತು ಕಾಜಲ್ ಅಗರ್ವಾಲ್ ನಟಿಸಿದ್ದ ‘ಕೋಮಾಲಿ’ (2019) ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಪ್ರದೀಪ್ ನಟನೆಯ ಚೊಚ್ಚಲ ಚಿತ್ರ ‘ಲವ್ ಟುಡೇ’ (2022). ಇದನ್ನು ಅವರೇ ಬರೆದು ನಿರ್ದೇಶಿಸಿದ್ದರು. AGS ಎಂಟರ್‌ಟೈನ್‌ಮೆಂಟ್ ನಿರ್ಮಿಸಿತ್ತು.
ಅಶ್ವತ್ ಮಾರಿಮುತ್ತು ನಿರ್ದೇಶನದ ಮತ್ತು AGS ಎಂಟರ್‌ಟೈನ್‌ಮೆಂಟ್ ನಿರ್ಮಾಣದ ‘ಡ್ರ್ಯಾಗನ್’ (2025) ಚಿತ್ರ ಬಿಡುಗಡೆಯಾದ 10ದಿನಗಳಲ್ಲಿಯೇ ವಿಶ್ವಾದ್ಯಂತ 100 ಕೋಟಿ ದಾಟುವ ಮೂಲಕ ಪ್ರದೀಪ್ ರಂಗನಾಥನ್ ಅವರ ಬಾಕ್ಸ್ ಆಫೀಸ್ ಯಶಸ್ಸನ್ನು ಮುಂದುವರೆಸಿತು. ‘ಡ್ಯೂಡ್’ ಚಿತ್ರದ ಮೂಲಕ ಪ್ರದೀಪ್ ಮತ್ತೊಮ್ಮೆ ತಮ್ಮ ಪ್ರಬಲ ಬಾಕ್ಸ್ ಆಫೀಸ್ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
—-





Be the first to comment