ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಭುದೇವ್

ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆಯ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬಹುಭಾಷಾ ನಟ ಪ್ರಭುದೇವ್ ನಟಿಸಲಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಚಿತ್ರ ತಯಾರಾಗಲಿದೆ. ಚಿತ್ರದಲ್ಲಿ ಪ್ರಭುದೇವ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಚಿತ್ರದ ತಾರಾಬಳಗ, ತಾಂತ್ರಿಕವರ್ಗದ ಮಾಹಿತಿ ಮುಂದೆ ನೀಡುವುದಾಗಿ ನಿರ್ಮಾಪಕ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.

ಪ್ರಭುದೇವ್ ಜೊತೆ ಸಂದೇಶ್ ನಾಗರಾಜ್ ಅವರು ಸಿನಿಮಾ ಮಾಡುತ್ತಿರುವ ವಿಷಯ ಕನ್ನಡ ಚಿತ್ರರಂಗದಲ್ಲಿ ಕುತೂಹಲವನ್ನು ಉಂಟು ಮಾಡಿದೆ.

ಕೆಲ ದಿನಗಳ ಹಿಂದೆ ಸಂದೇಶ್ ನಾಗರಾಜ್ ಅವರು ಶಿವರಾಜ್‌ ಕುಮಾರ್ ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಇದೇ ಮೊದಲ ಬಾರಿಗೆ ಸಂದೇಶ್ ನಾಗರಾಜ್ ಶಿವಣ್ಣ ಜೊತೆ ಸಿನಿಮಾ ಮಾಡುತ್ತಿದ್ದು ಕುತೂಹಲ ಮೂಡಿಸಿದೆ. ಚಿ. ಗುರುದತ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ.

ಸಂದೇಶ್ ನಾಗರಾಜ್ ನಿರ್ಮಾಣ ಸಂಸ್ಥೆಯಲ್ಲಿ ಇತ್ತೀಚೆಗೆ ನಿರ್ಮಾಣಗೊಂಡ ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿವೆ. ಡಾರ್ಲಿಂಗ್ ಕೃಷ್ಣ ಅಭಿನಯದ ‘ಶ್ರೀಕೃಷ್ಣಜಿಮೇಲ್ ಡಾಟ್ ಕಾಮ್’, ದರ್ಶನ್ ಅಭಿನಯದ ‘ಒಡೆಯ’ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲಲು ವಿಫಲ ಆಗಿವೆ. ಹೊಸದಾಗಿ ಘೋಷಣೆ ಆಗಿರುವ ಸಿನಿಮಾಗಳು ಯಾವ ರೀತಿ ಮೋಡಿ ಮಾಡುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!