ಪ್ರಭು ಮತ್ತು ಮೂರ್ತಿಯ ‘ಬಿಂಬ….!

ಒಂದೇ ಶಾಟ್

ಒಬ್ಬ ಕಲಾವಿದ

ಒಂದೇ ಸ್ಥಳ

ಒಂದೇ ವಾದ್ಯ-ಕೊಳಲು

ನಿರ್ದೇಶನ -ಜಿ.ಮೂರ್ತಿ , ಶ್ರೀನಿವಾಸ್ ಫ್ರಭು

‘ಬಿಂಬ’ ಚಿತ್ರವನ್ನು ಒಂದೇ ಶಾಟ್,ಒಬ್ಬ ಕಲಾವಿದ,ಒಂದೇ ಸ್ಥಳ,ಒಂದೇ ವಾದ್ಯ-ಕೊಳಲು ಹಾಗೂ ಒಂದೇ ಲೊಕೇಷನ್‍ನಲ್ಲಿ ಚಿತ್ರೀಕರಿಸುವ ಮೂಲಕ ಮೂರ್ತಿ ಹೊಸದೊಂದು ದಾಖಲೆ ಬರೆದಿದ್ದಾರೆ.!

ಚಿತ್ರರಂಗಕ್ಕೆ ಕಲಾ ನಿರ್ದೇಶಕನಾಗಿ ಪರಿಚಿತನಾಗಿ ನೂರು ಚಿತ್ರಗಳಿಗೆ ಕೆಲಸ ಮಾಡಿರುವ ಮೂರ್ತಿ, ಇತ್ತೀಚೆಗೆ ವೈಷ್ಣವಿ ಎಂಬ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿಯು ಮಿಂಚಿದ್ದರು. ಅವರ ನಿರ್ದೇಶನ ಗರಡಿಯಲ್ಲಿ ಮತ್ತೊಂದು ಚಿತ್ರವನ್ನು ಕನ್ನಡಿಗರಿಗೆ ನೀಡಲು ಸಿದ್ಧರಾಗಿದ್ದಾರೆ. ತಮ್ಮ ನಿರ್ದೇಶನದ ಎರಡನೇ ಚಿತ್ರವಾಗಿ ನಿರ್ದೇಶಿಸುತ್ತಿರುವ ಬಿಂಬ ಚಿತ್ರವನ್ನು ಒಂದೇ ಶಾಟ್ ಹಾಗೂ ಒಂದೇ ಲೊಕೇಷನ್‍ನಲ್ಲಿ ಚಿತ್ರೀಕರಿಸುವ ಮೂಲಕ ಮೂರ್ತಿ ಹೊಸದೊಂದು ದಾಖಲೆ ಬರೆದಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಬಾಳಿ ಬದುಕಿದ್ದ ಸಾಹಿತಿಯೊಬ್ಬರ ಜೀವನಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಹಿರಿಯ ಕಲಾವಿದ ಶ್ರೀನಿವಾಸ ಪ್ರಭು ಸಾಹಿತಿ ಸಾಸರ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಹಿಂದೆ ಬರಗೂರು ರಾಮಚಂದ್ರಪ್ಪ ಅವರು ಭಾವನಾ ಅಭಿನಯಿಸಿದ ಶಾಂತಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಆದರೆ ಅದು ಮಲ್ಪಿಪಲ್ ಶಾಟ್‍ಗಳಲ್ಲಿ ಚಿತ್ರಿತವಾಗಿತ್ತು.

ಬಿಂಬ ಚಿತ್ರಕ್ಕೆ ಹಿರಿಯ ಛಾಯಾಗ್ರಾಹಕ ಪಿ.ಕೆ.ಎಚ್.ದಾಸ್ ಅವರು ಸತತವಾಗಿ 103 ನಿಮಿಷಗಳ ಕಾಲ ಒಂದು ಚಿಕ್ಕ ಮನೆಯಲ್ಲೇ ಚಿತ್ರೀಕರಣ ಮಾಡಿದ್ದಾರೆ. ಈ ಚಿತ್ರದ ಹಿನ್ನೆಲೆಸಂಗೀತವೂ ವಿಶೇಷತೆಯಿಂದ ಕೂಡಿದ್ದು ಸಂಗೀತ ವಾದಕವಾಗಿ ಕೇವಲ ಒಂದು ಕೊಳಲನ್ನು ಮಾತ್ರ ಉಪಯೋಗಿಸಿ ಪ್ರವೀಣ್ ಗೋಡ್ಕಿಂಡಿ ಕೇವಲ ಫ್ಲೂಟ್ ಮೂಲಕ ಸಂಗೀತ ನೀಡಿದ್ದಾರೆ.

 

ನಟ ಶ್ರೀನಿವಾಸಪ್ರಭು , ಸಾಹಿತಿ ಸಾಸರು ಅವರು ಕಾರಣವೇ ಇಲ್ಲದೆ ಭ್ರಮೆಗಳಲ್ಲಿ ತೊಳಲಾಡುತ್ತಿದ್ದರೂ ಅನೇಕ ಕೃತಿಗಳನ್ನು ರಚಿಸಿದ್ದಾರೆ, ಅವರ ಸಾಮಿಯ ಸ್ವಗತ ಎಂಬ ನಾಟಕದ ಪ್ರೇರಣೆಯಿಂದ ಈ ಚಿತ್ರ ರೂಪು ತಳೆದಿದ್ದು, ಆ ನಾಟಕದಲ್ಲಿ ನಾನು ನಟಿಸಿದ್ದರಿಂದ ಈ ಚಿತ್ರದಲ್ಲಿ ಸುಲಲಿತವಾಗಿ ನೂರು ನಿಮಿಷಗಳ ಕಾಲ ಕ್ಯಾಮೆರಾ ಮುಂದೆ ನಟಿಸಲು ಸುಲಭವಾಯಿತು. ಬಡ ಸಾಹಿತಿಯೊಬ್ಬನ ಮಾನಸಿಕ ಕ್ಷೋಭೆಯ ಚಿತ್ರಣ ಇದರಲ್ಲಿದೆ ಎಂದು ಹೇಳಿದರು.  ಈಗಾಗಲೇ ಚಿತ್ರದ ಡಬ್ಬಿಂಗ್ ಮುಗಿದಿದ್ದು ಎಫೆಕ್ಟ್ ಕೆಲಸ ನಡೀತಿದೆ. ಬಡ ಸಾಹಿತಿಯೊಬ್ಬನ ಜೀವನಗಾಥೆಯನ್ನು ಹೊಂದಿರುವ ಬಿಂಬಕ್ಕೆ ಪ್ರೇಕ್ಷಕರು ಉತ್ತಮ ಸ್ವಾಗತ ಕೋರುವಂತಾಗಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!