ಪೌಡರ್

POWDER Movie Review: ಮನರಂಜಿಸುವ ಡ್ರಗ್ಸ್ ‘ಪೌಡರ್’

ಚಿತ್ರ: ಪೌಡರ್
ನಿರ್ದೇಶನ: ಜನಾರ್ಧನ್ ಚಿಕ್ಕಣ್ಣ
ನಿರ್ಮಾಣ: ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಮಣ್ಯಂ, ಅರುನಬ್ ಕುಮಾರ್
ತಾರಾಗಣ: ದಿಗಂತ್, ಧನ್ಯ ರಾಮಕುಮಾರ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ ಇತರರು
ರೇಟಿಂಗ್: 3.5

ಚೀನಾದಿಂದ ಬಂದ ಡ್ರಗ್ಸ್ ಪ್ಯಾಕ್ ಮಿಸ್ ಆಗಿ ಮೂರನೇ ವ್ಯಕ್ತಿಗಳಿಗೆ ಸಿಕ್ಕಾಗ ಅವರ ಚಿತ್ರ ವಿಚಿತ್ರ ನಡವಳಿಕೆಯ ಮನರಂಜನಾತ್ಮಕ ಚಿತ್ರವಾಗಿ ಪೌಡರ್ ಈ ವಾರ ತೆರೆಗೆ ಬಂದಿದೆ.

ಚಿತ್ರದಲ್ಲಿ ವಿಚಿತ್ರ ಪಾತ್ರಗಳಿವೆ. ನಿರ್ದೇಶಕರು ಈ ಮೊದಲೇ ಹೇಳಿದಂತೆ ಇದು ಲಾಜಿಕ್ ಇಲ್ಲದ, ಮ್ಯಾಜಿಕ್ ತುಂಬಿದ ಸಿಲ್ಲಿ ಕಾಮಿಡಿ ಚಿತ್ರ. ಪ್ರೇಕ್ಷಕರು ಲಾಜಿಕ್ ಇಲ್ಲದ ಸಿಲ್ಲಿ ಕಾಮಿಡಿಯನ್ನು ಎಂಜಾಯ್ ಮಾಡುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.

ಚಿತ್ರದಲ್ಲಿ ಡ್ರಗ್ಸ್ ಪ್ಯಾಕ್ ಕಳೆದು ಹೋದಾಗ ಏನೆಲ್ಲಾ ಸನ್ನಿವೇಶಗಳು ನಡೆಯುತ್ತವೆ ಎನ್ನುವುದನ್ನು ಹೇಳಲಾಗಿದೆ. ಚಿತ್ರದ ನಾಯಕನಿಗೆ ಡ್ರಗ್ಸ್ ಪ್ಯಾಕ್ ಪೊಲೀಸರಿಗೆ ಕೊಟ್ಟು ಮೆಡಲ್ ಪಡೆಯುವ ಆಸೆ. ಆದರೆ ನಾಯಕಿಗೆ ಡ್ರಗ್ಸ್ ಪ್ಯಾಕ್ ಮಾರಾಟ ಮಾಡಿ ದುಡ್ಡು ಮಾಡುವ ದುರಾಸೆ. ಈ ನಡುವೆ ಒಂದಷ್ಟು ಬೇರೆ ಪಾತ್ರಗಳು ಬಂದು ಹೋಗುತ್ತವೆ. ಒಟ್ಟಾರೆ ಚಿತ್ರ ಹಾಸ್ಯ ನೀಡುವಲ್ಲಿ ಯಶಸ್ವಿಯಾಗಿದೆ. ಕಳೆದು ಹೋದ ಪ್ಯಾಕ್ ಏನಾಗುತ್ತದೆ ಎನ್ನುವುದಕ್ಕೆ ಮುಂದಿನ ಭಾಗವನ್ನು ನೋಡಬೇಕಿದೆ.

ದಿಗಂತ್, ಗೋಪಾಲಕೃಷ್ಣ ದೇಶಪಾಂಡೆ, ರಂಗಾಯಣ ರಘು ತಮ್ಮ ಅಭಿನಯದ ಮೂಲಕ ಖುಷಿ ನೀಡುತ್ತಾರೆ. ಶರ್ಮಿಳಾ ಮಾಂಡ್ರೆ, ರವಿಶಂಕರ್ ಗೌಡ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರದ ಛಾಯಾಗ್ರಹಣ, ಕಲಾ ನಿರ್ದೇಶನ, ಪಿಎಫ್ಎಕ್ಸ್ ಕೆಲಸಗಳು ಹೈಲೈಟ್ಸ್ ಆಗಿ ಮೂಡಿ ಬಂದಿವೆ.

ಪ್ರಸ್ತುತ ಪ್ರೇಕ್ಷಕರ ಬರ ಎದುರಿಸುತ್ತಿರುವ ಚಿತ್ರಮಂದಿರಗಳಿಗೆ ಕಷ್ಟ ಪಟ್ಟು ಬಂದ ಪ್ರೇಕ್ಷಕರನ್ನು ರಂಜಿಸಿ ಖುಷಿಪಡಿಸುವಲ್ಲಿ ಈ ಚಿತ್ರ ಯಶಸ್ವಿಯಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!