ಪೌಡರ್‌

ಅ.4 ರಿಂದ ‘ಪೌಡರ್‌’ ಒಟಿಟಿಯಲ್ಲಿ ಪ್ರಸಾರ

ಡಾರ್ಕ್‌ ಕಾಮಿಡಿ ‘ಪೌಡರ್‌’ ಸಿನಿಮಾ ಅಕ್ಟೋಬರ್‌ 4 ರಿಂದ  ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ.

ಗಸ್ಟ್‌ 23 ರಂದು ಚಿತ್ರಮಂದಿರದಲ್ಲಿ ತೆರೆ ಕಂಡ  ಪೌಡರ್‌ ಸಿನಿಮಾ ರಿಲೀಸ್‌ ಆಗಿ ಒಂದೂವರೆ ತಿಂಗಳ ನಂತರ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಮಾದಕ ದ್ರವ್ಯ ರವಾನೆಯಲ್ಲಿ ಸಮಸ್ಯೆಯಾಗಿ ತಪ್ಪಿಹೋದ ವಸ್ತುಗಳನ್ನು ಮರು ಪಡೆಯುವ ಪ್ರಕ್ರಿಯೆಯಲ್ಲಿ ವಿಲನ್‌ ಹಾಗೂ ಆತನ ಗ್ಯಾಂಗ್‌ ಏನೆಲ್ಲಾ ಪ್ರಯತ್ನ ಮಾಡುತ್ತದೆ. ಅದರಿಂದ ಏನು ಸಮಸ್ಯೆ ಅನುಭವಿಸುತ್ತಾರೆ ಅನ್ನೋದನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಚಿತ್ರವನ್ನು ಜನಾರ್ಧನ್ ಚಿಕ್ಕಣ್ಣ ನಿರ್ದೇಶಿಸಿದ್ದಾರೆ. ದಿಗಂತ್, ಧನ್ಯಾ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ರವಿಶಂಕರ್ ಗೌಡ, ಗೋಪಾಲ್ ಕೃಷ್ಣ ದೇಶಪಾಂಡೆ ಹಾಗೂ ಇನ್ನಿತರರು ನಟಿಸಿದ್ದಾರೆ.  ಅಮೆಜಾನ್‌ ಪ್ರೈಂ ವಿಡಿಯೋ ಈ ಚಿತ್ರದ ಡಿಜಿಟಲ್‌ ಹಕ್ಕುಗಳನ್ನು ಖರೀದಿಸಿದೆ.

ಪೌಡರ್‌ ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋಸ್‌, ದಿ ವೈರಲ್‌ ಫೀವರ್‌ ಬ್ಯಾನರ್‌ ಅಡಿ ಕಾರ್ತಿಕ್‌ ಗೌಡ, ಯೋಗಿ ಜಿ ರಾಜ್‌, ವಿಜಯ್‌ ಸುಬ್ರಮನಿಯನ್‌, ಅರುಣ್‌ ಕುಮಾರ್  ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್‌ ಸಂಗೀತ ನೀಡಿದ್ದಾರೆ.

ಈ ಸಿನಿಮಾ   ಒಂದೊಳ್ಳೆ ಎಂಟರ್‌ಟೈನರ್‌, ಒಳ್ಳೆ ಕಾಮಿಡಿ ದೃಶ್ಯಗಳಿವೆ ಎಂದು ಥಿಯೇಟರ್‌ನಲ್ಲಿ ನೋಡಿದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!