ಕನ್ನಡಪರ ಹೋರಾಟಗಾರರು ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾದ ಪೋಸ್ಟರ್ ಹರಿದಿದ್ದಾರೆ.
ಆಂಧ್ರ, ತೆಲಂಗಾಣ ಸೇರಿದಂತೆ ಕರ್ನಾಟಕ, ತಮಿಳುನಾಡು, ಕೇರಳ, ಉತ್ತರ ಭಾರತ ಹಾಗೂ ವಿದೇಶಗಳಲ್ಲಿ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾದ ಪೋಸ್ಟರ್ ತೆಲುಗಿನಲ್ಲಿದೆ. ಸಿನಿಮಾದ ಯಾವುದೇ ಪೋಸ್ಟರ್ ಕನ್ನಡದಲ್ಲಿ ಇಲ್ಲವೆಂದು ಚಿತ್ರಮಂದಿರದವರ ಜೊತೆಗೆ ಕನ್ನಡಪರ ಹೋರಾಟಗಾರರು ವಾಗ್ವಾದ ಮಾಡಿದ್ದು, ಪವನ್ ಕಲ್ಯಾಣ್ ಅವರ ದೊಡ್ಡ ಪೋಸ್ಟರ್ ಒಂದನ್ನು ಹರಿದು ಹಾಕಿದ್ದಾರೆ.
ಪವನ್ ಕಲ್ಯಾಣ್ ಪೋಸ್ಟರ್ ಹರಿಯುವ ವೇಳೆ ಅಲ್ಲಿಯೇ ಇದ್ದ ಕೆಲ ಪವನ್ ಕಲ್ಯಾಣ್ ಅಭಿಮಾನಿಗಳು ವಿರೋಧಿಸಿದ್ದು, ಅವರೊಟ್ಟಿಗೆ ಕನ್ನಡಪರ ಹೋರಾಟಗಾರರು ವಾಗ್ವಾದ ಮಾಡಿದ್ದಾರೆ. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಕನ್ನಡಪರ ಹೋರಾಟಗಾರರ ಪೋಸ್ಟರ್ ಹರಿದಿರುವ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ಹರಿ ಹರ ವೀರ ಮಲ್ಲು’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡದಲ್ಲಿಯೂ ಸಿನಿಮಾ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಸಿನಿಮಾದ ಕನ್ನಡ ಆವೃತ್ತಿಗೆ ಸಿಕ್ಕಿರುವುದು ಎರಡು ಚಿತ್ರಮಂದಿರ ಮತ್ತು ಆರು ಶೋಗಳು ಮಾತ್ರ. ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಸಿನಿಮಾ ಬಿಡುಗಡೆ ಆಗಿದ್ದು, ಬಹುತೇಕ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ಗಳು ತೆಲುಗು ಭಾಷೆಯಲ್ಲಿಯೇ ಸಿನಿಮಾ ಬಿಡುಗಡೆ ಮಾಡಿವೆ. ಸಿನಿಮಾದ ಪ್ರಚಾರದ ಪೋಸ್ಟರ್ಗಳು ತೆಲುಗಿನಲ್ಲಿಯೇ ಇವೆ.
—-





Be the first to comment