ಪೋಸ್ಟರ್ ಹಂಚಿಕೊಂಡ ಶಿವಣ್ಣ

ಹ್ಯಾಟ್ರಿಕ್ ಶಿವರಾಜ್‍ಕುಮಾರ್ ಇದೀಗ ಕಾಲಿವುಡ್​ಗೆ ಎಂಟ್ರಿಕೊಟ್ಟಿದ್ದು, ಸಿನಿಮಾ ಪೋಸ್ಟರ್ ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ಸುದ್ದಿ ನೀಡಿದ್ದಾರೆ.

ಅರುಣ್ ಮಾಥೇಶ್ವರನ್ ನಿರ್ದೇಶನದಲ್ಲಿ ಶಿವರಾಜ್ ಕುಮಾರ್ ನಟಿಸುತ್ತಿದ್ದಾರೆ. ಶಿವಣ್ಣ ತಮಿಳು ನಟ ಧನುಷ್ ಅಭಿನಯದ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಲಿದ್ದು, ಧನುಷ್ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕ್ಯಾಪ್ಟನ್ ಮಿಲ್ಲರ್ ಚಿತ್ರಕ್ಕೆ ಸತ್ಯಜ್ಯೋತಿ ಫಿಲ್ಮ್ಸ್‌ ಬಂಡವಾಳ ಹೂಡಿದೆ.

ಸಂದೀಪ್ ಕಿಶನ್ ಮತ್ತು ಪ್ರಿಯಾಂಕಾ ಅರುಲ್ ಮೋಹನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಈ ‘ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಬಿಡುಗಡೆಯಾಗಲಿದೆ.

ಶಿವರಾಜ್‌ ಕುಮಾರ್ ನಟನೆಯ ಬಹು ನಿರೀಕ್ಷಿತ ‘ವೇದ’ ಸಿನಿಮಾ ರಿಲೀಸ್ ಗೆ ಇನ್ನೂ ಕೆಲ ದಿನಗಳು ಮಾತ್ರವೇ ಭಾಕಿ ಇದೆ. ವೇದ ಸಿನಿಮಾ ಕಣ್ಮುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!