ಪೂಜಾ ರಮೇಶ್ ಈಗ ನಾಯಕಿ

ಮೂರು ವರ್ಷಗಳ ಹಿಂದೆ ನಿರೂಪಕಿಯಾಗಿ ಕಲಾರಂಗಕ್ಕೆ ಬಂದ ಪೂಜಾರಮೇಶ್ ಈಗ ಚಿತ್ರರಂಗದಲ್ಲಿ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ಚಿತ್ರರಂಗದಿಂದ ಅವಕಾಶಗಳು ದೊರಕಿದವು. ನಿರುದ್ಯೋಗಿ ಚಿತ್ರದ ನಂತರ ಅರವಿಂದ, ಪೇಪರ್ ದೋಣಿ, ಲಹರಿ, ತಾಂಡವ, ಮಹಾಕಾಳಿ ಚಿತ್ರಗಳಲ್ಲಿ ಪೂಜಾರಮೇಶ್ ನಟಿಸಿದ್ದಾರೆ. ಅವರು ಮೊದಲನೇ ಚಿತ್ರದಲ್ಲಿ ಅಭಿನಯಿಸುತ್ತಿರುವಾಗಲೇ ಧಾರಾವಾಹಿಯಲ್ಲಿ ನಟಿಸಲು ಆಫರ್ ಬಂದಿದೆ. ಅದರ ಪಲವಾಗಿ ಕಾಮಧೇನು ಎಂಬ ದಾರಾವಾಹಿಯ ಪ್ರಮುಖ ಪಾತ್ರದಾರಿಯಾಗಿ ಎರಡು ವರ್ಷ ಸತತವಾಗಿ ವರ್ಕ್ ಮಾಡಿದ್ದಾರೆ. ಆ ನಂತರ ಜಾನವಿ, ಸಂಭವಾಮಿ ಯುಗೇ ಯುಗೇ, ಗ್ರಹಣ, ಪಾಂಡುರಂಗ ವಿಠ್ಠಲ, ಪಾರ್ವತಿ, ಎಸೆಸೆಲ್ಸಿ ನನ್‌ಮಕ್ಕಳು, ಪರಮೇಶ್ವರ, ಅಶ್ವಿನಿ ನಕ್ಷತ್ರ ಅಲ್ಲದೆ ೨ ತೆಲುಗು ಸೀರಿಯಲ್‌ಗಳಲ್ಲೂ ಸಹ ಪೂಜಾ ರಮೇಶ್ ಅವರು ಅಭಿನಯಿಸಿದ್ದಾರೆ.

ಬಣ್ಣದ ಲೋಕದಿಂದ ಒಂದಷ್ಟು ಕಾಲ ಬ್ರೇಕ್ ತಗೊಂಡಿದ್ದ ಪೋಜಾ ಈಗ ಸ್ಲಿಮ್ ಆಗಿ ಮತ್ತೆ ಇಂಡಸ್ಟ್ರಿಗೆ ಕಂಬ್ಯಾಕ್ ಆಗಿದ್ದಾರೆ. ಇಷ್ಟು ವರ್ಷ ಬ್ರೇಕ್ ತಗೊಂಡಿದ್ದ ಪೂಜಾಗೆ ಈಗ ಸಾಕಷ್ಟು ಬಿಗ್‌ಬ್ಯಾನರ್ ಚಿತ್ರಗಳಲ್ಲಿ ಅವಕಾಶಗಳು ಸಿಗುತ್ತಿವೆ. ಅಲ್ಲದೆ ತಮಿಳು, ತೆಲುಗು ಇಂಡಸ್ಟ್ರಿಯಿಂದಲೂ  ಸಹ ಅವಕಾಶಗಳು ಸಿಗುತ್ತಿವೆ. ಆದರೆ ಕನ್ನಡಕ್ಕೆ ನಾನು ಹೆಚ್ಚಿನ ಪ್ರಾದಾನ್ಯತೆ ನೀಡುತ್ತೇನೆ ಎನ್ನುವ ಪೂಜಾ ರಮೇಶ್ ಮತ್ತದೇ ಹೊಸ ಹುರುಪಿನಲ್ಲಿ ಹೊಸ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!