ಜ್ಯೂ.ಎನ್ಟಿಆರ್ ಗೆ ಸಚಿವ ಅಮಿತ್ ಶಾ ಅವರು ರಾಜಕೀಯ ಆಹ್ವಾನ ನೀಡಿದ್ದಾರೆ ಎಂದು ವರದಿಯಾಗಿದೆ.
ಆಗಸ್ಟ್ 2ರಂದು ಜ್ಯೂ.ಎನ್ಟಿಆರ್ ಮನೆಗೆ ಅಮಿತ್ ಶಾ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಅಲ್ಲದೇ ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತೆಲುಗು ಚಿತ್ರರಂಗಕ್ಕೆ ಜೂನಿಯರ್ ಎನ್ ಟಿ ಆರ್ ರತ್ನ ಎಂದು ಹೊಗಳಿದ್ದರು. ಬಿಜೆಪಿಯ ಚಾಣಾಕ್ಯ ಅಮಿತ್ ಶಾ ಸ್ಟಾರ್ ನಟನನ್ನು ಭೇಟಿ ಮಾಡಿದ ಹಿಂದೆ ರಾಜಕೀಯ ಕಾರಣ ಇದೆ ಎಂದೇ ಹೇಳಲಾಗುತ್ತಿತ್ತು. ಈಗ ರಾಜಕೀಯಕ್ಕೆ ಬರಲು ಅಮಿತ್ ಶಾ ಅವರು ಜ್ಯೂ.ಎನ್ಟಿಆರ್ಗೆ ಆಹ್ವಾನ ನೀಡಿದ್ದಾರೆ ಎಂದು ವರದಿ ಆಗಿದೆ.
ಜ್ಯೂ.ಎನ್ಟಿಆರ್ ತಂದೆ ನಂದಮೂರಿ ಹರಿಕೃಷ್ಣ ಸಂಸದರಾಗಿದ್ದರು. ಜ್ಯೂ.ಎನ್ಟಿಆರ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ರಾಜಕೀಯಕ್ಕೆ ಸೇರಿದರೆ ಆ ಫ್ಯಾನ್ಬೇಸ್ ಮತವಾಗಿ ಮಾರ್ಪಾಡಾಗಲಿದೆ ಎಂಬುದು ಶಾ ಲೆಕ್ಕಾಚಾರ ಎನ್ನಲಾಗಿದೆ.
ಜ್ಯೂ.ಎನ್ಟಿಆರ್ ಅವರು ಟಿಡಿಪಿಯಲ್ಲಿ ಸಕ್ರಿಯ ಆಗಿದ್ದರು. ಚಂದ್ರಬಾಬು ನಾಯ್ಡು ಅವರ ಮಗ ನಾರಾ ಲೋಕೇಶ್ ಅವರು ರಾಜಕೀಯಕ್ಕೆ ಬಂದ ನಂತರದಲ್ಲಿ ಜ್ಯೂ.ಎನ್ಟಿಆರ್ ಅವರು ರಾಜಕೀಯದಿಂದ ಹೊರಗುಳಿದರು. ಈಗ ಅವರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡುತ್ತಿದೆ.
ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಈ ಕಾರಣಕ್ಕೆ ಜ್ಯೂ.ಎನ್ಟಿಆರ್ ಅವರನ್ನು ಅಮಿತ್ ಶಾ ಟ್ರಂಪ್ ಕಾರ್ಡ್ ಆಗಿ ಬಳಕೆ ಮಾಡಿಕೊಳ್ಳಲು ಯೋಚಿಸುತ್ತಿದ್ದಾರೆ ಎಂದು ಹೇಳಲಾಗಿದೆ.
____
Be the first to comment