ವಿನಯ್ ರಾಜ್‌ಕುಮಾರ್ ನಟನೆಯ ಬಹುನಿರೀಕ್ಷಿತ ಪೆಪೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಇಷ್ಟು ದಿನ ಕ್ಲಾಸ್ ಆಗಿದ್ದ ವಿನಯ್ ರಾಜ್‌ಕುಮಾರ್ ಈ ಬಾರಿ ಮಾಸ್ ಅವತಾರವೆತ್ತಿದ್ದಾರೆ. ತೆರೆಮೇಲೆ ಲವರ್‌ಬಾಯ್, ಮಿಡಲ್ ಕ್ಲಾಸ್ ಹುಡುಗನಾಗಿಯೇ ಕಂಡಿದ್ದ ವಿನಯ್ ರಾಜ್‌ಕುಮಾರ್, ಇದೀಗ ತಮ್ಮ ಸ್ಟ್ರೇಂಥ್ ಏನು ಎಂಬುದನ್ನು ಪೆಪೆ ಸಿನಿಮಾ ಮೂಲಕ ತೋರಿಸಿದ್ದಾರೆ. ನಿರ್ದೇಶಕ ಶ್ರೀಲೇಶ್, ವಿನಯ್ ಅವರನ್ನು ರಗಡ್ ಆಗಿಯೇ ತೋರಿಸಿದ್ದಾರೆ.
ಪೆಪೆ ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ಸೆಟಲ್ ಆಗಿಯೇ ನಟಿಸಿ ಪ್ರೇಕ್ಷಕರಿಗೆ ಥ್ರಿಲ್ ಮೂಡಿಸುತ್ತಿದ್ದಾರೆ. ತಮ್ಮ ಸಖತ್ ರಗಡ್ ಲುಕ್‌ನಿಂದಲೂ ಇಲ್ಲಿ ಗಮನ ಸೆಳೆದಿದ್ದಾರೆ. ಆದರೆ, ಈ ಒಂದು ಚಿತ್ರದಲ್ಲಿ ನಿರೀಕ್ಷೆ ಮಾಡದೇ ಇರೋ ಕ್ರೌರ್ಯ ಕೂಡ ಇದೆ ಅನಿಸುತ್ತಿದೆ.
ರಕ್ತ ಮತ್ತು ಮಚ್ಚು ಇವು ಇಲ್ಲಿ ಹೆಚ್ಚು ಬಳಕೆ ಆಗಿವೆ. ನಾಯಕಿ ಕಾಜಲ್ ಕುಂದರ್ ರೂಪವಂತೂ ಇಲ್ಲಿ ಭಯಂಕರ್ ಅನಿಸುತ್ತದೆ. ಬಿಳಿ ಬಣ್ಣದ ಬಟ್ಟೆ ತೊಟ್ಟು ರಕ್ತಸಿಕ್ತವಾಗಿಯೇ ಕಾಣಿಸಿಕೊಂಡಿದ್ದಾರೆ. ಇದು ನಿಜಕ್ಕೂ ಕ್ರೌರ್ಯ ಜೀವಂತ ಉದಾಹರಣೆ ಅಂತಲೇ ಇದೆ.

Be the first to comment