ಒಟಿಟಿಗೆ ಪೆಪೆ

ಒಟಿಟಿಗೆ ಬಂತು ಪೆಪೆ!

ವಿನಯ್‌ ರಾಜ್‌ಕುಮಾರ್‌ ಅಭಿನಯದ ಪೆಪೆ ಸಿನಿಮಾ ಒಟಿಟಿಗೆ ಬಂದಿದೆ.

ಪೆಪೆ ಸಿನಿಮಾ ಆಗಸ್ಟ್‌ 30ಕ್ಕೆ ತೆರೆ ಕಂಡಿತ್ತು. ಆದರೆ ಸಿನಿಮಾ ಸಕ್ಸಸ್‌ ಕಂಡಿರಲಿಲ್ಲ. ಸಿನಿಮಾ ರಿಲೀಸ್‌ಗೂ ಮುಂಚೆ ರಕ್ತಸಿಕ್ತ ಟೀಸರ್‌ ಹಾಗೂ ಟ್ರೈಲರ್‌ನಿಂದ ಮೆಚ್ಚುಗೆ ಗಳಿಸಿತ್ತು. ವಿನಯ್‌ ಅವರು ಗಡ್ಡ ಬಿಟ್ಟುಕೊಂಡು ರಗಡ್‌ ಲುಕ್‌ನಲ್ಲಿ ಕಂಡಿದ್ದರು. ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಸಿಕ್ಕಿತ್ತು.

ದಸರಾ ಸಂಭ್ರಮದಲ್ಲಿ ಪೆಪೆ ಸಿನಿಮಾ ಒಟಿಟಿಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದೆ. ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ.

ಕೇರಳ ಮೂಲದ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದರು. ಉದಯ್‌ ಶಂಕರ್‌.ಎಸ್‌ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್‌ ಚಿತ್ರ ನಿರ್ಮಾಣ ಮಾಡಿದ್ದರು.

ತಾರಾಬಳಗದಲ್ಲಿ ವಿನಯ್‌ ರಾಜ್‌ಕುಮಾರ್‌, ಅರುಣಾ ಬಾಲರಾಜ್‌, ಮಯೂರ್ ಪಟೇಲ್, ಮೇದಿನಿ ಕೆಳಮನೆ, ನವೀನ್ ಪಡೀಲ್, ಯಶ್ ಶೆಟ್ಟಿ, ರವಿ ಪ್ರಸಾದ್ ಮಂಡ್ಯ ಸೇರಿ ಇನ್ನೂ ಹಲವರು ನಟಿಸಿದ್ದಾರೆ. ಉದಯ್‌ ಸಿನಿ ವೆಂಚರ್ಸ್‌ ಮತ್ತು ದೀಪಾ ಫಿಲಂಸ್‌ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ.

ವಿನಯ್‌ ರಾಜ್‌ಕುಮಾರ್‌ ಅವರು ದುನಿಯಾ ವಿಜಯ್ ಡೈರೆಕ್ಷನ್ ಮಾಡ್ತಿರೋ ಚಿತ್ರದಲ್ಲಿ ಇದ್ದಾರೆ. ಈ ಪೋಸ್ಟರ್‌ನಲ್ಲಿ ವಿನಯ್‌ ರಾಜ್‌ಕುಮಾರ್‌ ಅವರ ಮುಖ ಮಾತ್ರ ರಿವೀಲ್‌ ಆಗಿದೆ. ಆದರೆ ಪಾತ್ರದ ಬಗ್ಗೆ ಯಾವುದೇ ಮಾಹಿತಿ ಚಿತ್ರತಂಡ ಹೇಳಿಲ್ಲ.

Be the first to comment

Leave a Reply

Your email address will not be published. Required fields are marked *

Translate »
error: Content is protected !!