ಪೆಂಟಗನ್ ಚಿತ್ರದ 5ನೇ ಟೀಸರ್ ಜನವರಿ 18 ರಂದು ಬಿಡುಗಡೆಯಾಗಲಿದೆ.
ಐದು ಕಥೆಗಳನ್ನು ಒಳಗೊಂಡ, ಐವರು ನಿರ್ದೇಶಕರು ನಿರ್ದೇಶನ ಮಾಡಿರುವ ಚಿತ್ರ ಇದಾಗಿದೆ. ಗುರು ದೇಶಪಾಂಡೆ ನಿರ್ದೇಶನ ಮಾಡಿರುವ ಕಥೆಯಲ್ಲಿ ಮುಖ್ಯಪಾತ್ರವನ್ನು ಕಿಶೋರ್ ಮಾಡಿದ್ದಾರೆ.
ಪೃಥ್ವಿ ಅಂಬಾರ್ ಕೂಡ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿರುವುದು ವಿಶೇಷ ಆಗಿದೆ. ಅಶ್ವಿನಿ ಗೌಡ ಸೇರಿದಂತೆ ಹಲವು ಅನುಭವಿ ಕಲಾವಿದರು ಇದರಲ್ಲಿದ್ದಾರೆ.
ಈ ಚಿತ್ರದ ಕುರಿತು ಮಾಹಿತಿ ಹಂಚಿಕೊಳ್ಳುವ ಗುರು ದೇಶಪಾಂಡೆ, ಈ ಕಥೆಯು ಕನ್ನಡ ಹೋರಾಟಗಾರನೊಬ್ಬನ ಕುರಿತು ಇದೆ. ಅವನ ವ್ಯಕ್ತಿತ್ವವನ್ನು ವೈಭವೀಕರಿಸದೇ ಅಥವಾ ಅವನ ಕ್ರಿಯಾಶೀಲತೆಯ ಬಗ್ಗೆ ನಕಾರಾತ್ಮಕವಾಗಿ ಹೇಳದೆ ಹೋರಾಟಗಾರನೊಬ್ಬನ ಒಳತುಮುಲ ಹಾಗೂ ಅವನ ಜೀವನ ಸುತ್ತ ನಡೆಯುವ ಘಟನೆಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಇದೊಂದು ಸೂಕ್ಷ್ಮ ರೀತಿಯ ಕಥೆಯಾಗಿದೆ. ಅದನ್ನು ಅಷ್ಟೇ ನಾಜೂಕಾಗಿ ಹಿಡಿದಿಡುವ ಪ್ರಯತ್ನವನ್ನು ಮಾಡಿದ್ದೇವೆ ಎಂದಿದ್ದಾರೆ.
ಗುರು ದೇಶಪಾಂಡೆ ನಿರ್ದೇಶನ ಮಾಡಿರುವ ಈ ಕಥೆಗೆ ಅಭಿಲಾಷ್ ಕಲತ್ತಿ ಅವರ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ.
‘ಪೆಂಟಗನ್’ ಸಿನಿಮಾದಲ್ಲಿ ‘ಶಿವಾಜಿ ಸುರತ್ಕಲ್’ ಖ್ಯಾತಿಯ ಆಕಾಶ್ ಶ್ರೀವತ್ಸ, ‘ಬ್ರಹ್ಮಚಾರಿ’ ಖ್ಯಾತಿಯ ಚಂದ್ರ ಮೋಹನ್, ‘ಚೂರಿಕಟ್ಟೆ’ ಖ್ಯಾತಿಯ ರಾಘು ಶಿವಮೊಗ್ಗ, ಹೊಸ ಪ್ರತಿಭೆ ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಜಿ ಸಿನಿಮಾಸ್ ಬ್ಯಾನರ್ ನ ಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ.
__

Be the first to comment