‘ಪೆಂಟಗನ್’ ಸಿನಿಮಾದಲ್ಲಿ ಕನ್ನಡಪರ ಹೋರಾಟಗಾರರಿಗೆ ಅವಮಾನವಾಗಿದೆ ಎಂದು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿಶೋರ್ ನಟನೆಯ ಪೆಂಟಗನ್ ಸಿನಿಮಾದ ಐದನೇ ಕಥೆಯ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ನೋಡಿದ ರೂಪೇಶ್ ರಾಜಣ್ಣ, ವೇದಿಕೆ ಮೇಲೆಯೇ ಕೋಪ ತೋರಿಸಿದ್ದಾರೆ.
ಪೆಂಟಗನ್ ಸಿನಿಮಾದಲ್ಲಿ ಕನ್ನಡಪರ ಹೋರಾಟಗಾರರ ಕಥೆ ಇದೆ. ಈ ಟೀಸರ್ ನಲ್ಲಿ ಕನ್ನಡಪರ ಹೋರಾಟಗಾರರ ಬಗ್ಗೆ ಹಲವು ಆಕ್ಷೇಪಾರ್ಹ ಪದಗಳನ್ನು ಬಳಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ರೋಲ್ ಕಾಲ್ ಶಬ್ದ ಬಳಕೆಯಾಗಿದೆ. ಇದಕ್ಕೆ ರೂಪೇಶ್ ರಾಜಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ನಟಿ, ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ ಕೂಡ ವಿರೋಧ ತೋರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಗುರು ದೇಶಪಾಂಡೆ, ಟೀಸರ್ ನೋಡಿಯೇ ಎಲ್ಲವನ್ನೂ ತೀರ್ಮಾನಿಸಬೇಡಿ. ಸಿನಿಮಾ ಬಂದ ಮೇಲೆ ಅದರ ಒಳಗೆ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಟೀಸರ್ ನಲ್ಲಿ ಏನೆ ಮಾತನಾಡಿಸಿದರೂ, ಸಿನಿಮಾದಲ್ಲಿ ಅದಕ್ಕೆ ಉತ್ತರ ಸಿಗಲಿದೆ. ಸಿನಿಮಾ ನೋಡಿದ ಮೇಲೆ ನಿಮ್ಮಲ್ಲಿ ಪ್ರಶ್ನೆಗಳಿದ್ದರೆ ಆಗ ಪ್ರತಿಭಟಿಸಿ ಎಂದು ಹೇಳಿದ್ದಾರೆ.
___

Be the first to comment