ನಟಿ ಪವಿತ್ರಾ ಲೋಕೇಶ್ ಮಳ್ಳಿ ಪೆಳ್ಳಿ ಚಿತ್ರದ ಮೂಲಕ ತಮ್ಮ ಸಂಭಾವನೆಯನ್ನು ಹೆಚ್ಚಿಗೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ದಿನಕ್ಕೆ ೬೦ ಸಾವಿರ ರೂ. ಪಡೆಯುತ್ತಿದ್ದ ಅವರ ಸಂಭಾವನೆ ಒಂದು ಲಕ್ಷ ರೂ. ಗೆ ಏರಿಕೆ ಆಗಿದೆ ಎನ್ನಲಾಗುತ್ತಿದೆ.
ಪವಿತ್ರಾ ಲೋಕೇಶ್ ಅವರು ಮಳ್ಳಿ ಪೆಳ್ಳಿ ಚಿತ್ರದ ನಟನೆಗಾಗಿ 10 ಕೋಟಿ ರೂ. ಪಡೆದಿದ್ದಾರೆ ಎಂದು ಸುದ್ದಿ ಹರಡಿದೆ. ಆದರೆ, ಈ ಬಗ್ಗೆ ಚಿತ್ರತಂಡವಾಗಲಿ, ನಿರ್ಮಾಪಕರಾಗಲಿ ಸ್ಪಷ್ಟೀಕರಣ ನೀಡಿಲ್ಲ. ನರೇಶ್ ಅವರೇ ಚಿತ್ರಕ್ಕೆ 15 ಕೋಟಿ ಖರ್ಚು ಮಾಡಲಾಗಿದೆ ಎಂದಿದ್ದಾರೆ. ಪವಿತ್ರಾ ಲೋಕೇಶ್ 10 ಕೋಟಿ ರೂ. ಸಂಭಾವನೆ ಪಡೆದಿರುವುದು ಸುಳ್ಳು ಎಂದು ಕೆಲವರು ವಾದ ಮಾಡುತ್ತಿದ್ದಾರೆ.
‘ಸಮ್ಮೋಹನಂ’ ಚಿತ್ರಕ್ಕೆ ಒಟ್ಟಿಗೆ ಕೆಲಸ ಮಾಡಿದ್ದ ನರೇಶ್-ಪವಿತ್ರಾ ಆ ನಂತರ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಬಳಿಕ ಆತ್ಮೀಯರಾದರು. ನರೇಶ್ ಮತ್ತು ಪವಿತ್ರಾ ಲೋಕೇಶ್ ಇಬ್ಬರು ರಿಲೇಶನ್ ಶಿಪ್ನಲ್ಲಿರುವ ವಿಚಾರವನ್ನಿಟ್ಟುಕೊಂಡು ನಿರ್ದೇಶಕ ಎಂ.ಎಸ್.ರಾಜು ಅವರು ಮಳ್ಳಿ ಪೆಳ್ಳಿ ಚಿತ್ರ ತಯಾರಿಸಿದ್ದಾರೆ.
ಚಿತ್ರದಲ್ಲಿ ನರೇಶ್-ಪವಿತ್ರ ಸಂಬಂಧ ಅಷ್ಟೇ ಅಲ್ಲದೇ ಅವರಿಬ್ಬರ ವೈಯಕ್ತಿಕ ಜೀವನದಲ್ಲಿ ನಡೆದ ಘಟನೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಬಗ್ಗೆ ಬಂದಿರುವ ಸುದ್ದಿ, ಅದಕ್ಕೆ ಕಾರಣಗಳೇನು ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಶುಕ್ರವಾರ ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.
ಮಳ್ಳಿ ಪೆಳ್ಳಿ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿ ನರೇಶ್ ನಿರ್ಮಾಣ ಮಾಡಿದ್ದಾರೆ. ಎಂ.ಎಸ್ ರಾಜು, ಕಥೆ, ಆಕ್ಷನ್ ಕಟ್ ಹೇಳಿದ್ದಾರೆ.
ಜಯಸುಧ ಮತ್ತು ಶರತ್ ಬಾಬು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಚಿತ್ರದಲ್ಲಿ ಇದ್ದಾರೆ.
—–
Be the first to comment