ರಸ್ತೆ ಅಪಘಾತದಲ್ಲಿ ಭಾನುವಾರ ನಿಧನರಾದ ಸೀರಿಯಲ್ ನಟಿ ಪವಿತ್ರ ಜಯರಾಂ ಅವರ ಅಂತ್ಯಕ್ರಿಯೆಯನ್ನು ಇಂದು ಮಂಡ್ಯದಲ್ಲಿ ನೆರವೇರಿಸಲಾಗುತ್ತಿದೆ. ಅಂತಿಮ ದರ್ಶನ ಪಡೆಯಲು ಧಾರಾವಾಹಿಯ ನಟ ನಟಿಯರು ಮಂಡ್ಯಕ್ಕೆ ಭೇಟಿ ನೀಡುತ್ತಿದ್ದಾರೆ.
ಪವಿತ್ರ ಅವರ ಕುಟುಂಬದವರ ನಿರ್ಧಾರದಂತೆ ಮಂಡ್ಯಕ್ಕೆ ಪೋಸ್ಟ್ ಮಾರ್ಟಂ ಆದ ನಂತರ ಮಂಡ್ಯಕ್ಕೆ ಕರೆದುಕೊಂಡು ಬರಲಾಗಿದೆ. ಅವರ ಮಕ್ಕಳು ಈಗ ಮಂಡ್ಯದಲ್ಲೇ ಇದ್ದಾರೆ. ಮಂಡ್ಯ ತಾಲೂಕಿನ ಉಮ್ಮಡಹಳ್ಳಿಯಲ್ಲಿ ಇಂದು ಅವರ ಅಂತ್ಯಕ್ರಿಯೆ ನಡೆಯುತ್ತದೆ. ಹನಕೆರೆ ಗ್ರಾಮದವರಾಗಿದ್ದ ಪವಿತ್ರ ತನ್ನ ಸೋದರ ಸಂಬಂಧಿ ಉಮ್ಮಡಹಳ್ಳಿಯ ಶಿವಕುಮಾರ್ ರನ್ನು ಮದುವೆಯಾಗಿದ್ದರು.
ಕಳೆದ ಎರಡು ದಶಕಗಳಿಂದ ಸೀರಿಯಲ್ ಆಕ್ಟಿಂಗ್ ಮಾಡ್ತಿದ್ದ ಪವಿತ್ರ ಬೆಂಗಳೂರಿನಲ್ಲಿ ನೆಲೆಸಿದ್ದರು. ಸದ್ಯ ಧಾರಾವಾಹಿಗಳಲ್ಲಿ ಹೆಚ್ಚು ಬ್ಯೂಸಿ ಇದ್ದ ಕಾರಣ ಅವರು ಚೆನೈ ಮತ್ತು ಹೈದ್ರಾಬಾದ್ ನಡುವೆ ಓಡಾಡಿಕೊಂಡಿದ್ದರು.
ಭಾನುವಾರ ಬೆಳಗ್ಗೆ ಆಂಧ್ರ ಪ್ರದೇಶದ ಮೆಹಬೂಬ ನಗರದ ಬಳಿ ಪವಿತ್ರಾ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಹೈದರಾಬಾದ್‌ನಿಂದ ವನಪರ್ತಿಗೆ ಬರುತ್ತಿದ್ದ ಬಸ್ ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಪವಿತ್ರಾ ಜಯರಾಮ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಡ್ಯದ ಹನಕೆರೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಕನ್ನಡದ ‘ರೋಬೋ ಫ್ಯಾಮಿಲಿ’ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ತಮ್ಮದೇ ಆದ ಐಡೆಂಟಿಟಿ ರೂಪಿಸಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಬಂದಿದ್ದರು. ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಮೊದಲು ಸಣ್ಣ ಸಣ್ಣ ಪಾತ್ರಗಳನ್ನು ಅಭಿನಯಿಸುತ್ತಾ ಸೀರಿಯಲ್ ಲೋಕಕ್ಕೆ ಕಾಲಿಟ್ಟಿದ್ದರು.
ಪವಿತ್ರಾ ಜಯರಾಮ್ ತೆಲುಗಿನಿ ‘ತ್ರಿನಯನಿ’ ಸೀರಿಯಲ್ ನಟಿಸುತ್ತಿದ್ದರು. ಈ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಪ್ರಸಾರ ಕಂಡಿದೆ.
Be the first to comment